ಕಳಸ ಲೈವ್ ವರದಿ
ಸಮಾಜದಲ್ಲಿ ಅಪರಾಧತಡೆಗೆ ಪೊಲೀಸ್ ವ್ಯವಸ್ಥೆ ಇದೆ ಹಾಗೂ ಖಾಕಿ ಇರುವುದೇ ಜನರ ಸೇವೆಗೆ ಎಂದು ಕಳಸ ಪೊಲೀಸ್ ಠಾಣೆಯ ಪಿಎಸ್ಐ. ಹೆಚ್. ಕೆ ಹರ್ಷ ವರ್ಧನ್ ಹೇಳಿದರು.
ಭಾನುವಾರ ಎನ್. ಆರ್. ಪುರ ತಾಲೂಕಿನ ಕಡಬಗೆರೆ ಮತ್ತು ಮಾಗಲ ಗ್ರಾಮದ ಮಾದರಿ ಮತ್ತು ಬೆಳಕು ಜ್ಞಾನ ವಿಕಾಸ ಕೇಂದ್ರ ದ ಮಹಿಳಾ ಸದಸ್ಯರಿಗೆ ಒಂದು ದಿನ ಅಧ್ಯಯನ ಪ್ರವಾಸ ದಲ್ಲಿ ಕಳಸ ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಮಾಹಿತಿ ಕಾರ್ಯಕ್ರಮ ದಲ್ಲಿ ಗ್ರಾಮೀಣ ಭಾಗದ ಜನರಿಗೆ ಪೊಲೀಸ್ ಇಲಾಖೆಯ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿ. ಆರ್. ಮೋಹನ್ ಕುಮಾರ್ ಮಾತನಾಡುತ್ತಾ ಭಾವನೆ ಗಳ ನೆಲೆಯಲ್ಲಿ ಬದುಕು ರೂಪಿತ ವಾಗುತ್ತದೆ ಬದುಕಿನಲ್ಲಿ ಸ್ತ್ರೀ ಶಕ್ತಿ ಹೆಚ್ಚಿನ ನೆಲೆ ಹಾಗೂ ಬೆಲೆ ಇದೆ. ಆತ್ಮವಂಚನೆಯ ಬದುಕು ದೂರ ಮಾಡಿ ಭಾವನಾತ್ಮಕ ವಾಗಿ ಬದುಕು ವುದನ್ನು ಕಲಿಯಬೇಕು ಎಂದು ಪೊಲೀಸ್ ಇಲಾಖೆಯ ಮಹಿಳೆಯರಿಗೆ ಸಂಬಂಧ ಪಟ್ಟ ಮಾಹಿತಿ ನೀಡಿದರು..
ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಕು!!ಚೈತ್ರಾ,. ಮೇಲ್ವಿಚಾರಕ.ಶಿವರಾಜ್ ಸೇವಾ ಪ್ರತಿನಿಧಿ ಪ್ರಮೀಳಾ ರವಿಶೆಟ್ಟಿ. ನಂದಕುಮಾರಿ.ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಾಮಚಂದ್ರ ಮುಂತಾದವರು ಇದ್ದರು.