ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನೆ ಬಿ. ಸಿ ಟ್ರಸ್ಟ್ (ರಿ). ಮೂಡಿಗೆರೆ ಕಳಸ ಎ. ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಳುವಳ್ಳಿ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟಗಳು ಹಾಗೂ ಜ್ಞಾನವಿಕಾಸ ಮಹಿಳಾ ಕೇಂದ್ರಗಳು ಕಳಸ ಎ. ವಲಯ, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಕಳಸ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಾನುವಾರ ಹಳುವಳ್ಳಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಶ್ರೀ ಸರ್ವ ಸಿದ್ದಿ ಕುಮಾರ ಸಭಾ ಭವನದಲ್ಲಿ ನಡೆಯಿತು.
ಶ್ರೀ ನರಸಿಂಹ ಆಶ್ರಮ ಸ್ವಾಮೀಜಿ ಬಾಲೆ ಕುಂದ್ರು ಮಠ ಅಂಗಾರಕಟ್ಟೆ ಇವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಬೆಳಿಗ್ಗೆ 7.30ಗೆ ಶ್ರೀ ಸತ್ಯನಾರಾಯಣ ಪೂಜೆಯ ವಿಧಿ ವಿಧಾನಗಳು ನೆರವೇರಿತು. ಇದೇ ಸಂದರ್ಭದಲ್ಲಿ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ನೆರವೇರಿತು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ವಿ.ಎಸ್. ರಂಗನಾಥ್ ಭಟ್, ಜಿಲ್ಲಾ ನಿರ್ದೇಶಕರು ಪ್ರಕಾಶ್ ರಾವ್, ಕಳಸ ಗ್ರಾಮ ಪಮಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಟಿ.ವಿ ವೆಂಕಟಸುಬ್ಬಯ್ಯ, ಎ.ಎನ್ ಉದಯಕುಮಾರ್, ಯೋಜನಾಧಿಕಾರಿ ಶಿವಾನಂದ್ ಪಿ, ಕಳಸ ಎ ವಲಯ ಮೆಲ್ವಿಚಾರಕರು ಶ್ರೀನಿವಾಸ್ ಇದ್ದರು, ವಿವಿಧ ಒಕ್ಕೂಟಗಳ ಅಧ್ಯಕ್ಷರುಗಳು ಸದಸ್ಯರುಗಳು, ಸೇವಾ ಪ್ರತಿನಿಧಿಗಳು ಇದ್ದರು.