ಕಳಸ ಲೈವ್ ವರದಿ
ಇಲ್ಲಿಯ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವಂಬರ್ 11 ಮತ್ತು ನವಂಬರ್ 12 ರಂದು ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ ತಿಳಿಸಿದ್ದಾರೆ.
ನ 11ರಂದು ಶ್ರೀ ಉದ್ಬವ ಗಣಪತಿ ಸ್ವಾಮಿಗೆ ಲಕ್ಷದೂರ್ವಾರ್ಚನೆ, ರಾತ್ರಿ ಅನ್ನಪೂರ್ಣೇಶ್ವರಿಗೆ ದೀಪೋತ್ಸವ ಹಾಗೂ ಪ್ರಾಂಗಣ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಅಂದು ಬೆಳಿಗ್ಗೆ 10ಕ್ಕೆ ಭಕ್ತನಿವಾಸದಲ್ಲಿ 14 ನೇ ವರ್ಷದ ಉಚಿತ ನೇತ್ರ ತಪಾಸಣಾ ಶಿಬಿರ,ಅಂಬಾ ವಿಲಾಸದಲ್ಲಿ 11ನೇ ವರ್ಷದ ಉಚಿತ ರಕ್ತದಾನ ಶಿಬಿರ ನಡೆಯಲಿದೆ.
ನ 12ರಂದು ಬೆಳಿಗ್ಗೆ 11 ಗಂಟೆಗೆ ಅನ್ನಪೂರ್ಣೇಶ್ವರಿಗೆ ಮಾಂಗಲ್ಯ ಮಂಟಪದಲ್ಲಿ ಕೋಟಿ ಕುಂಕುಮಾರ್ಚನೆ,ರಾತ್ರಿ 9.30ಗೆ ಶ್ರೀ ಮಾತೆಗೆ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವ ಹಾಗೂ ಪ್ರಾಂಗಣ ಚಿಕ್ಕ ರಥೋತ್ಸವ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನ 11ರಂದು ರಾತ್ರಿ 7 ರಿಂದ ಲಲಿತಕಲಾ ಮಂಟಪದಲ್ಲಿ ಡಾ.ರೇಖಾ ರಾಜು ಮತ್ತು ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ, ನ 12 ರಂದು ರಾತ್ರಿ 7 ರಿಂದ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿಧುಷಿ ಪ್ರೀತಿಕಲಾ ಮತ್ತು ತಂಡದವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.