ಕಳಸ ಲೈವ್ ವರದಿ
ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ ದಕ್ಷಿಣ ಕಾಶಿ ಕಲಶೇಶ್ವರ ದೇವರ ಗಿರಿಜಾ ಕಲ್ಯಾಣ ಮಹೋತ್ಸವ ಮಂಗಳವಾರದ ರಾತ್ರಿ ಹರಿಹರ ಸಮಾಗಮದೊಂದಿಗೆ ತೆರೆಬಿದ್ಧಿದೆ.
ಕಳೆದ ಎಂಟು ದಿನಗಳಿಂದ ಗಿರಿಜಾ ಕಲ್ಯಾಣ ನಿಮಿತ್ತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಶುಕ್ರವಾರ ಇಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ನಡೆದಿತ್ತು. ನಂತರದ ಉತ್ಸವಾದಿ ಕಾರ್ಯಕ್ರಮಗಳು ನಡೆದ ಬಳಿಕ ಮಂಗಳವಾರ ರಾತ್ರಿ ಮಹಾ ಸಂಪ್ರೋಕ್ಷಣೆ, ಧಾತ್ರಿ ಹೋಮ ರಾತ್ರಿ ಬಿಂದು ಮಾಧವ, ಕಾಲಬೈರವ, ವಶಿಷ್ಠ ಗಣಪತಿ ದೆವಸ್ಥಾನದಲ್ಲಿ ಪೂಜೆಗಳು ನಡೆದು ವಶಿಷ್ಠಾ ತೀರ್ಥದ ಮೂಲಕ ಕಲಶೇಶ್ವರ ದೇವರನ್ನು ಹೊತ್ತು ಗಣಪತಿಕಟ್ಟೆಗೆ ಬರಲಾಯಿತು.ಅಲ್ಲಿ ಕಟ್ಟೆ ಪೂಜೆ ನಡೆದು ತ್ರಿಪುರೋತ್ಸವ ನಡೆದ ಬಳಿಕ ದೇವರನ್ನು ಹೊತ್ತು ವೆಂಕಟರಮಣ ದೇವಸ್ಥಾನದ ಬಳಿ ಬರಲಾಯಿತು. ಅಲ್ಲಿ ಹರಿ ಮತ್ತು ಹರರ ಸಮಾಗಮ ನಡೆದು ನಂತರ ವಿವಿಧ ಹೂಗಳಿಂದ ಶೃಂಗರಿಸಲ್ಪಟ್ಟ ಪ್ರತ್ಯೇಕ ಮಂಟಪದಲ್ಲಿ ಹರಿ ಹರರನ್ನು ಕುಳ್ಳಿರಿಸಿ ವಿಜ್ರಂಭಣೆಯ ಉತ್ಸವ ನಡೆಯಿತು.
ಉತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಗಳ ಮುಂದೆ ರಂಗೋಲಿ ಇಟ್ಟು,ತಳಿರು ತೋರಣಗಳನ್ನು ಕಟ್ಟಿ,ದೀಪಗಳನ್ನು ಹಚ್ಚಿ.ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಮನೆ ಮನೆಗಳಲ್ಲಿ ಹಣ್ಣು ಕಾಯಿ ನೀಡಿದರು. ವರಷಕ್ಕೊಮ್ಮೆ ಮಾತ್ರ ಹರಿ ಹರರು ಬೇಟಿಯಾಗುವ ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಕಳಸ ಸುತ್ತಮುತ್ತಲಿನ ಸಾವಿರಾರು ಭಕ್ತರು ಆಗಮಿಸಿದ್ದರು.
ಅಶ್ವತಕಟ್ಟೆಯ ವರೆಗೆ ನಡೆದ ಉತ್ಸವದ ನಂತರ ಹರನು ಗಿರಿಜಾಂಬ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ನಡೆದು ನಂತರ ಕಲಶೇಶ್ವರ ದೇವಸ್ಥಾನಕ್ಕೆ ಬಂದರೆ, ಹರಿಯು ವೆಂಕಟರಮಣ ದೇವಸ್ಥಾನಕ್ಕೆ ತೆರಳಿದರು. ಇದರೊಂದಿಗೆ ಎಂಟು ದಿನಗಳ ಕಾಲ ವಿವಿದ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆಅದ್ದೂರಿಯಾಗಿ ನಡೆದ ಗಿರಿಜಾ ಕಲ್ಯಾಣ ಉತ್ಸವಕ್ಕೆ ತೆರೆಬಿದ್ದಿತು.