ಕಳಸ ಲೈವ್ ವರದಿ
ಬೆಂಗಳೂರಿನ ಪ್ರತಿಷ್ಠಿತ ಕಂಪೆನಿ ಯಲ್ಲಿ ಉದ್ಯೋಗಿ ಯಾಗಿರುವಂತ ಶ್ರೇಯಂಶ ಡಿ ಜೈನ್. ಹೊರನಾಡಿನ ಧರ್ಮಪಾಲ್ ಮತ್ತು ಯಶಸ್ವತಿ ಇವರ ಪುತ್ರ.(ಈಗ ಧರ್ಮಸ್ಥಳದಲ್ಲಿ ಇವರ ಮನೆ) ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷವನ್ನ ನಂಬಿರುವ ಈ ಯುವಕ ಲಾಕ್ ಡೌನ್ ಸಮಯದಲ್ಲಿ ಕಚೇರಿಗೆ ಹೋಗದೆ ಮನೆಯಲ್ಲಿಯೇ ಕಚೇರಿ ಕೆಲಸ ಮಾಡ್ತಾ ಇದ್ದರು .ಇವರು ಬೆಂಗಳೂರಿನಲ್ಲಿ ಗೀರ್ ತಳಿಯ ಹಸುವೊಂದನ್ನು ಪಡೆದುಕೊಂಡು ಸಾಕಲು ಶುರುಮಾಡಿದರು. ಇವರಿಗೆ ಚಿಕ್ಕಂದಿನಿಂದಲೂ ಗೋವು ಎಂದರೆ ಎಲ್ಲಿಲ್ಲದ ಪ್ರೀತಿ. ಅಯ್ಯೋ ಇದರಲ್ಲಿ ಏನಿದೆ ಅಂತೀರಾ…… ಹೊಲ ಗದ್ದೆ ಇದ್ದು ಕೊಂಡೆ ಹಸು ಸಾಕಲು ನೀರಾಕರಿಸುವಾಗ ಇವರು ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಇಂಥ ಹಸು ಸಾಕುವುದು ಕಷ್ಟದ ಕೆಲಸವೇ ಸರಿ….. ಇದಕ್ಕೆ ಕೈ ಜೋಡಿಸಿದವರು ಇವರ ಪತ್ನಿ ರಶ್ಮಿ ಶ್ರೆಯಂಶ
ಆ ಹಸುವಿಗೆ ಪಾರ್ವತಿ ಎಂದು ನಾಮಕರಣ ಮಾಡಿದರು. ಅವಳ ಮಗನೇ ಈ ಭೀಷ್ಮ. ಮೊದಲ ಕರುವಾದ 2 ವರ್ಷದ ಭೀಷ್ಮನನ್ನು ಧರ್ಮಸ್ಥಳದ ಗೋ ಶಾಲೆಗೆ ಬಿಡುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಹರಕೆ ತೀರಿಸಲು ಭೀಷ್ಮ ನನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಬರಲು ದಿನ ನಿಗದಪಡಿಸಿ, ಧರ್ಮಸ್ಥಳಕ್ಕೆ ಯಾತ್ರೆ ಪ್ರಾರಂಭಿಸಿದರು.
ಭೀಷ್ಮ ನ ಜೊತೆ ಪಾದಯಾತ್ರೆಯ ಮೂಲಕ ಹೊರಟ ಇವರು ಭೀಷ್ಮ ನ ಜೊತೆ ತಾಯಿ ಮಗುವಿನ ರೀತಿಯಲ್ಲಿ ಪ್ರೀತಿ ಕಾಳಜಿಯಿಂದ ಎಲ್ಲಿ ಸಹ ಎಳ್ಳಷ್ಟೂ ಭೀಷ್ಮನಿಗೆ ನೋವು ಆಗದ ಹಾಗೆ ಸುಮಾರು 33ದಿನಗಳ ಸುಂದರ ಪ್ರಯಾಣದ ಜೊತೆ ಧರ್ಮಸ್ಥಳಕ್ಕೆ ಬಂದು ಹರಕೆ ಪೂರೈಸಿದ್ದಾರೆ.
ಇವರ ಪ್ರಯಾಣ ಈ ರೀತಿ ಇತ್ತು. ಬೆಳಿಗ್ಗೆ 4 ಗಂಟೆಗೆ ಪ್ರಯಾಣ ಶುರು ಮಾಡಿದರೆ 9ಗಂಟೆಗೆ ವಿರಾಮ. ಭೀಷ್ಮ ಮಲಗಿದ ಮೇಲೆ ಇವರ ಕಛೇರಿ ಕೆಲಸ. ಬೆನ್ನಲ್ಲಿ ಒಂದು ಲಾಪ್ ಟಾಲ್ ಬ್ಯಾಕ್ ಹಾಕಿಕೊಂಡು, ಗತ್ತು ಗಾಂಭೀರ್ಯದಿಂದ ನಡೆಯುವ ಭೀಷ್ಮ ನ ಜೊತೆ ಇವರ ಪ್ರಯಾಣ. ಯಾರಿಗೂ ತಿಳಿಸದೆ ಯಾವುದೇ ಪ್ರಚಾರ ವಿಲ್ಲದೆ ಭಕ್ತಿ ಯಿಂದ ಇವರ ಪಾದಯಾತ್ರೆ ಸಾಗಿದೆ ಎಂದರೆ ತಪ್ಪಾಗಲಾರದು.