ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕಳಸ ಮಹಾವೀರ ವೃತ್ತದಿಂದ ಕಳಸ ಸರ್ಕಾರಿ ಪ್ರೌಢ ಶಾಲೆವರೆಗಿನ ರಸ್ತೆ ದುರಸ್ಥಿ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸ್ಥಳೀಯರು ಕರೆ ನೀಡಿದ್ದ ಪ್ರತಿಭಟನೆಯನ್ನು ಮೂಡಿಗೆರೆ ಸಿವಿಲ್ ನ್ಯಾಯಧೀಶರಿಗೆ ಮನವಿ ನೀಡಿದ್ದು, ಅವರು ನೀಡಿದ ಸಲಹೆಯಂತೆ ಪ್ರತಿಭಟನೆಯನ್ನು ವಾಪಸು ಪಡೆದುಕೊಂಡಿದ್ದೇವೆ ಎಂದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಟಿಟ್ಟು ಥಾಮಸ್ ತಿಳಿಸಿದ್ದಾರೆ.
ಕಳಸ ಮಹಾವೀರ ವೃತ್ತದಿಂದ ಕಳಸ ಸರ್ಕಾರಿ ಪ್ರೌಢ ಶಾಲೆವರೆಗಿನ ರಸ್ತೆ ದುರಸ್ಥಿ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸ್ಥಳೀಯರು ಕರೆ ನೀಡಿದ್ದ ಪ್ರತಿಭಟನೆಯನ್ನು ಮಾಡುವ ನಿರ್ಧಾರ ಮಾಡಿದ್ದೇವು. ಆದರೆ ಸೋಮವಾರ ಕಳಸದಲ್ಲಿ ಕಾನೂನು ಸಾಕ್ಷರತಾ ಶಿಬಿರಕ್ಕೆ ಬಂದಿದ್ದ ನ್ಯಾಯಾಧೀಶರಾದ ವಿಶ್ವನಾಥ್ ಅವರಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿ, ಪ್ರವಾಸಿ ಕೇಂದ್ರವಾದ ಹೊರನಾಡನ್ನು ಕಳಸದೊಂದಿಗೆ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದ್ದು ದೀರ್ಘ ಕಾಲದಿಂದ ದುರಸ್ತಿ ನಡೆದಿಲ್ಲ. ಲೋಕೋಪಯೋಗಿ ಇಲಾಖೆ ಈ ರಸ್ತೆಯ ದುರಸ್ತಿ ಬಗ್ಗೆ ಮನಪೂರ್ವಕವಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಈ ರಸ್ತೆ ಬಳಸುವ ಶಾಲಾ ಮಕ್ಕಳು, ಗ್ರಾಮಸ್ಥರು ಮತ್ತು ಪ್ರವಾಸಿಗರು ವಿಪರೀತ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಮನವಿ ಪತ್ರದಲ್ಲಿ ಮಾಹಿತಿ ನೀಡಿದ್ದೇವೆ.
ತಾಲ್ಲೂಕಿನ ಇತರೆ ಹಲವಾರು ರಸ್ತೆಗಳ ಕಾಮಗಾರಿಗಳಲ್ಲೂ ಲೋಕೋಪಯೋಗಿ ಇಲಾಖೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ.ಆದ್ದರಿಂದ ವಿಳಂಬಿತ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಂಜಿನಿಯರ್ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯಾಧೀಶರಿಗೆ ಸಲ್ಲಿಸಿದ ಮನವಿಯಲ್ಲಿ ಕೋರಿದ್ದೇವೆ.
ಈ ಸಂದರ್ಭದಲ್ಲಿ ಈ ಸಮಸ್ಯೆಗೆ ಕಾನೂನಿನ ಮುಖಾಂತರ ಸಮಸ್ಯೆಗೆ ಪರಿಹಾರ ಮಾಡುತ್ತೇವೆ. ನಾಳೇನೆ ಸಂಬಂದಿಸಿದ ಅಧಿಕಾರಿಗಳಿಗೆ ನೋಟೀಸು ಕಳುಹಿಸಿ ಮುಂದಿನ ಶನಿವಾರ ಲೋಕ್ ಅದಾಲತ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಈ ರಸ್ತೆ ಕಾಮಗಾರಿ ಬಗ್ಗೆ ವಿವರಣೆ ಪಡೆಯುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ ಆದ್ದರಿಂದ ಪ್ರತಿಭಟನೆ ಕೈಬಿಟ್ಟು ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ಗೋಪಾಲ ಶೆಟ್ಟಿ, ರಮೇಶ್ ಕೆಳಗೂರು, ಸ್ಥಳಿಯರಾದ ಸೋಮಯ್ಯ ಇತರರು ಇದ್ದರು.