ಕಳಸ ಲೈವ್ ವರದಿ
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜೆಸಿಐ ಭಾರತ ವಲಯ 14ರ ವಲಯ ಸಮ್ಮೆಳನದಲ್ಲಿ ಕಳಸ ಜೇಸಿ ಘಟಕ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಇದರಲ್ಲಿ ಸುಧಾಸ್ ಕೆಫೆ ಮಾಲಿಕ ಸುಧಾಕರ್ ಗೆ ವಲಯ ಅತ್ಯುತ್ತಮ ಹಾಗೂ ಕ್ರೀಯಾಶೀಲ ಸದಸ್ಯ ಪ್ರಶಸ್ತಿಯನ್ನು ನೀಡಲಾಗಿದೆ.
ಇನ್ನುಳಿದಂತೆ ವಲಯ ಎಕ್ಸಲೆನ್ಸ್ ಪ್ರಸಿಡೆಂಡ್ ಪ್ರಶಸ್ತಿ ಕಳಸ ಜೆಸಿಐ ಅಧ್ಯಕ್ ಹೆಚ್.ಆರ್ ಪ್ರಶಾಂತ್ ಅವರ ಪಾಲಾಗಿದೆ. ರಾಷ್ಟ್ರೀಯ ಫ್ಲ್ಯಾಗ್ ಶಿಪ್ ಕಾರ್ಯಕ್ರಮಕ್ಕೂ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
ವಲಯ ಕಾರ್ಯಕ್ರಮಗಳ ಅಂಕಿ ಅಂಶಗಳ ವಿಭಾಗದಲ್ಲಿ 15 ಉತ್ತಮ ಘಟಕಗಳಲ್ಲಿ ಕಳಸ ಘಟಕವು ಒಂದಾಗಿದ್ದು, ಪ್ರಶಸ್ತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಕಳಸ ಜೆಸಿಐ ಸದಸ್ಯರುಗಳಾದ ಜಗದೀಶ್ ನಾಯ್ಕ್, ಕೆ.ಸಿ.ಮಹೇಶ್, ಚಂದ್ರಪ್ಪ, ಪ್ರಕಾಶ್ ಕುಮಾರ್, ಸಂತೋಷ್, ಮಧು, ಚರಣ್, ಸುನೀಲ್ ಇದ್ದರು. ಕಳಸ ಜೆಸಿಐ ಈ ಸಾಧನೆಗೆ ಕಳಸ ಘಟಕದ ಎಲ್ಲಾ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಮುಖ್ಯ ಕಾರಣ ಎಂದು ಘಟಕದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ.