ಕಳಸ ಲೈವ್ ವರದಿ
ಕಳಸ ಮಹಾವೀರ ವೃತ್ತದಿಂದ ಕಳಸ ಸರ್ಕಾರಿ ಪ್ರೌಢ ಶಾಲೆವರೆಗಿನ ರಸ್ತೆ ದುರಸ್ತಿ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧಾರ ಮಾಡಿರುವುದು ಒಂದೆಡೆಯದರೆ ಇದೇ ರಸ್ತೆಯ ದುಸ್ಥಿತಿಯ ಬಗ್ಗೆ ವ್ಯಂಗ್ಯ ಪೋಸ್ಟರ್ ಮಾಡಲಾಗಿದ್ದು, ಇದು ಸಾಕಷ್ಟು ವೈರಲ್ ಆಗುತ್ತಿದೆ.
ಈ ಹಿಂದೆ 2018ರ ಜುಲೈ ತಿಂಗಳಲ್ಲಿ ಕಳಸ ಮುಖ್ಯ ರಸ್ತೆಯ ಮಂಜಿನಕಟ್ಟೆ ಸಮೀಪ ಗುಂಡಿ ಬಿದ್ದಿದ್ದ ಸಂದರ್ಭದಲ್ಲಿ ಈಜುಕೊಳವೊಂದನ್ನು ಪಿಡ್ಲ್ಯೂಡಿ ಇಲಾಖೆಯ ಇಂಜಿನಿಯರ್ ನಿರ್ಮಾಣ ಮಾಡಿದ್ದಾರೆ. ಇದರ ಉದ್ಘಾಟನೆಗೆ ನಟಿಯರಾದ ಸನ್ನಿಲಿಯೋನ್, ದೀಪಿಕಾ ಪಡುಕೋಣೆ ಮಾಡಲಿದ್ದಾರೆ. ತಮಿಳು ನಟ ವಿಜಯ್ ಆಗಮಿಸಿ ಈಗಾಗಲೇ ಈಜುಕೊಳದ ಸೆಲ್ಫಿ ತೆಗೆದುಕೊಂಡಿದ್ದಾರೆ. ಪಟ್ಟಣದ ಯುವತಿಯರು ಈಜುಕೊಳದಲ್ಲಿ ಸ್ವಿಮ್ಮಿಂಗ್ ಆರಂಭಿಸಿದ್ದಾರೆಂದು ಪೋಸ್ಟರ್ ತಯಾರಿಸಿ ವ್ಯಂಗ್ಯದ ಕಾಮೆಂಟ್ ಹಾಕಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿ ಇದರಿಂದ ಫಲಶೃತಿ ಕಂಡುಕೊಂಡು ಇದೀಗ ಅಂತದೇ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಳಸ-ಹೊರನಾಡು ರಸ್ತೆಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸಾಕಷ್ಟು ದೂಳು ತುಂಬಿ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ವ್ಯಂಗವಾಗಿ ಬಿಂಬಿಸುವಂತೆ ಎರಡು ಗಿಳಿಗಳ ಜೊತೆಯೊಂದು ತನ್ನ ಬಣ್ಣ ಬದಲಿಸಿದ ಗಿಳಿ ಬಂದು ದೇವರಾಣೆ ಗೆಳೆಯರೇ, ನಾನು ಕಾಗೆಯಲ್ಲ ನಾನು ಬಂದಿದ್ದು ಕಳಸದಿಂದ ಎನ್ನುವ ಪೋಸ್ಟರ್, ವ್ಯಕ್ತಿಯೊಬ್ಬ ಆಪ್ರಿಕಾದಿಂದ ಬರುವಾಗ ಕಪ್ಪಗಿದ್ದ ಕಳಸದಿಂದ ತೆರಳುವಾಗ ತನ್ನ ಬಣ್ಣ ಬದಲಾಗಿರುವ ಬಗ್ಗೆ, ಸೂಪರ್ಮ್ಯಾನ್ ಕಳಸದಿಂದ ಹಾರಿದ ನಂತರ ಐಸಿಯು ದಾಖಲಾಗಿರುವ ಬಗ್ಗೆ ವಾಹನದಿಂದ ಬರುವ ಹೊಗೆ ಮಾಲಿನ್ಯ, ಕಳಸ ರಸ್ತೆಯಲ್ಲಿ ಉಂಟಾದ ದೂಳು ಇದು ಏನು? ಎಂದು ಪ್ರಶ್ನೆ ಮಾಡಿದ ಪೋಸ್ಟರ್ ಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗಿದ್ದು, ಇದು ಸಿಕ್ಕಾ ಪಟ್ಟೆ ವೈರಲ್ ಆಗಿದ್ದು, ಸಂಬಂಧ ಪಟ್ಟವರಿಗೆ ಇರುಸು ಮುರುಸು ಮಾಡುವಂತಾಗಿದೆ.
ಆದರೆ ಇಲಾಖೆ ಈ ಬಗ್ಗೆ ಯಾವ ರೀತಿಯ ಪ್ರತಿಕ್ರೀಯೆ ನೀಡುತ್ತದೆ ಎನ್ನುವುದು ಮಾತ್ರ ಪ್ರಶ್ನೆಯಾಗಿದೆ.