ಕಳಸ ಲೈವ್ ವರದಿ
ಜೆಸಿಐ ಕಳಸ ಘಟಕದ ಪ್ರಶಾಂತ್ ಹೆಚ್.ಆರ್. ಜೆಸಿಐ ವಲಯ 14ರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
2020ರಲ್ಲಿ ಕಳಸ ಜೆಸಿಐ ಸದಸ್ಯರಾಗಿ ಸೇರ್ಪಡೆಗೊಂಡು 2022ರಲ್ಲಿ ಕಳಸ ಜೆಸಿಐ ಕಳಸ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಕ್ಟೋಬರ್ 30ರಂದು ಮೈಸೂರಿನಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯ ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮ ಪತ್ರ ಸಲ್ಲಿಕೆ ಮಾಡಿದ್ದರು.
ಅಂತಿಮವಾಗಿ ಪ್ರಶಾಂತ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಂದು ವಲಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಯಶಸ್ವಿನಿ ಅವರಿಂದ ಪ್ರಮಾಣವಚನ ಸ್ವಿಕರಿಸಿದ್ದಾರೆ.
ಇದರೊಂದಿಗೆ ಕಳಸ ಜೆಸಿಐಯ 10 ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ವಲಯ ಉಪಾಧ್ಯಕ್ಷ ಸ್ಥಾನ ಕಳಸಕ್ಕೆ ಸಿಕ್ಕಿದಂತಾಗಿದೆ.