ಕಳಸ ಲೈವ್ ವರದಿ
ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ. ಮೇಲಂಗಡಿ ಕಳಸ ಇಲ್ಲಿ ಪ್ರತೀ ವರ್ಷದಂತೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ದಶಮಿಯಂದು ನಡೆಯುವ ವಿಶ್ವರೂಪ ದರ್ಶನ ಗುರುವಾರ ನೆರವೇರಿತು.
ಕಾರ್ತೀಕ ಮಾಸದಲ್ಲಿ ನಡೆಯುವ ವೈಭವದ ಈ ವಿಶ್ವರೂಪ ದರ್ಶನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಭಜಕರು ದೇವರಿಗೆ ದೀಪ ಬೆಳಗಿಸಿ ಪ್ರಾರ್ಥಿಸಿದರು.
ದೇವಸ್ಥಾನವನ್ನು ಹೂವು ರಂಗೋಲಿಗಳಿಂದ ಸಿಂಗರಿಸಲಾಗಿತ್ತು. ಸುಮಾರು 700ಕ್ಕೂ ಅಧಿಕ ಭಕ್ತಾದಿಗಳು ಬಂದು ಶ್ರೀ ದೇವರ ದರ್ಶನ ಪಡೆದರು.