ಕಳಸ ಲೈವ್ ವರದಿ
ಕಳಸದ ಹಳುವಳ್ಳಿಯಲ್ಲಿ ಕಾಳಿಕಾಂಬ ಉತ್ಸವ ಚಂಡೆ ಬಳಗ ಉದ್ಘಾಟನೆಗೊಂಡಿದೆ.
ಹಳುವಳ್ಳಿ ಭಾಗದ ನಿವಾಸಿಗಳಾದ ಸತೀಶ್ ಕೆ.ಆರ್, ರಾಧಕೃಷ್ಣ, ಅಖಿಲೇಶ್, ಅವಿನಾಶ್, ಬಾಲಚಂದ್ರ, ಭರತ್, ರಾಜೇಶ್ ಈ ಏಳು ಜನರ ತಂಡದ ಚಂಡೆ ಬಳಗಕ್ಕೆ ಹಳ್ಳುವಳ್ಳಿ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ.
ಕಳೆದ ಎರಡು ತಿಂಗಳಿನಿಂದ ಬ್ರಹ್ಮಾವರ ಚಂಡೆ ನಾಗರಾಜ ಆಚಾರ್ಯರವರಿಂದ ತರಬೇತಿಯನ್ನು ಪಡೆದಿದ್ದಾರೆ.
ಈಗಾಗಲೇ ನಾವು ಏಳು ಜನರ ತಂಡದೊಂದಿಗೆ ಕಾಳಿಕಾಂಬ ಉತ್ಸವ ಚಂಡೆ ಬಳಗವನ್ನು ಅಸ್ತಿತ್ವಕ್ಕೆ ತಂದಿದ್ದೇವೆ. ಹಳುವಳ್ಳಿ ಜಾತ್ರೆಗೆ ನಮ್ಮ ಮೊದಲ ಚಂಡೆ ಪ್ರದರ್ಶನವನ್ನು ನೀಡಿದ ಬಳಿಕ ವಿವಿಧ ಧಾರ್ಮಿಕ ಸಾಂಸ್ಕøತಿಕ ಉತ್ಸವಗಳಿಗೆ ನಮ್ಮ ಪ್ರದರ್ಶನ ನೀಡಲಿದ್ದೇವೆ ಎಂದು ತಂಡದ ಸತೀಶ್ ತಿಳಿಸಿದ್ದಾರೆ.