ಕಳಸ ಲೈವ್ ವರದಿ
ಕಳೆದ 10 ದಿನಗಳಿಂದ ವೈಭವದ ದುರ್ಗಾ ಪೂಜಾ ಮಹೋತ್ಸವಕ್ಕೆ ಬುಧವಾರ ದುರ್ಗಾ ದೇವಿಯನ್ನು ಕೋಟಿ ತೀರ್ಥದಲ್ಲಿ ವಿಸರ್ಜನೆ ಮಾಡುವುದರೊಂದಿಗೆ ದುರ್ಗಾ ಪೂಜಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಕಳೆದ ಎಲ್ಲಾ ವರ್ಷಗಳಿಂದ ಈ ಬಾರಿ ಅತ್ಯಂತ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅತ್ಯಂತ ವೈಭವದಿಂದ ನಡೆದ ಶರನ್ನವರಾತ್ರಿಯ ದುರ್ಗಾಪೂಜೆಯ ಅಂತಿಮ ದಿನ ಬುಧವಾರ ಕಳಸದ ರಾಜಬೀದಿಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ವೈಭವಯುತ ವಿಸರ್ಜನಾ ಮೆರವಣಿಗೆ ನಡೆಯಿತು.
ಸಂಜೆಯಾಗುತ್ತಲೇ ಕಳಸ ಕಲಶೇಶ್ವರ ದೇವಸ್ಥಾನದ ಮುಂಬಾಗದಿಂದ ಹೊರಟ ಮೆರವಣಿಗೆ ಭದ್ರಾ ನದಿಯ ಕೋಟಿ ತೀರ್ಥದವರೆಗೆ ಮುಂದುವರೆಯಿತು.
ದಾರಿಯುದ್ದಕ್ಕೂ ಹುಲಿವೇಷ, ಡಿಜೆಯ ಸಂಗೀತಕ್ಕೆ ಹಾಕುತ್ತಿದ್ದ ಯುವಕರ ಕುಣಿತದ ಹೆಜ್ಜೆ ಮೆರವಣಿಗೆಗೆ ಮೆರುಗು ನೀಡಿತ್ತು.
ಕೋಟಿ ತೀರ್ಥದ ಭದ್ರಾ ನದಿಯಲ್ಲಿ ತಡ ರಾತ್ರಿ ಶ್ರೀ ದೇವಿಯ ತೆಪ್ಪೋತ್ಸವ ನಡೆದ ನಂತರ ನೆರೆದ ಸಾವಿರಾರು ಭಕ್ತರ ಜಯಘೋಷದೊಂದಿಗೆ ಶ್ರೀ ದೇವಿಯ ವಿಗ್ರಹವನ್ನು ವಿರ್ಜಿಸಲಾಯಿತು.
ಇದರೊಂದಿಗೆ ಕಳೆದ 10 ದಿನಗಳಿಂದ ಕಳಸ ಪಟ್ಟಣದ ದುರ್ಗಾ ಮಂಟಪದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.