ಕಳಸ ಲೈವ್ ವರದಿ
ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯಿಂದ ನಡೆಯುತ್ತಿರುವ ಶ್ರೀ ದುರ್ಗಾ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಶಿವಾನಿ ಆರ್ಕೇಸ್ಟ್ರಾ ಮಂಗಳೂರು ಇವರಿಂದ ರಸಮಂಜರಿ ಆರ್ಕೇಸ್ಟ್ರಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ದುರ್ಗಾ ಪೂಜಾ ಮಹೋತ್ಸವದಲ್ಲಿ ಕಳೆದ ಎಂಟು ದಿನಗಳಿಂದ ಒಂದಕ್ಕಿಂತ ಒಂದು ಅದ್ಬುತ ಮತ್ತು ಯಶಸ್ವಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಮಂಗಳವಾರ ದುರ್ಗಾಪೂಜೆಯ ಕೊನೇಯ ಸಾಂಸ್ಕøತಿಕ ಕಾರ್ಯಕ್ರಮವನ್ನು ಟೀಮ್ 7 ಪ್ರಾಯೋಜಕತ್ವದಲ್ಲಿ ಶಿವಾನಿ ತಂಡದಿಂದ ರಸಮಂಜರಿ ಆರ್ಕೇಸ್ಟ್ರಾ ಅದ್ದೂರಿಯಾಗಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಟೀಮ್ 7 ಸದಸ್ಯರು ಕೇಳಿಕೊಂಡಿದ್ದಾರೆ.