ಕಳಸ ಲೈವ್ ವರದಿ
ಕಳಸ ಪ್ರೆಂಡ್ಸ್ ಕ್ಲಬ್ ವತಿಯಿಂದ ದಸರಾ ಪ್ರಯುಕ್ತ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿ ಭಾನುವಾರ ನಡೆಯಿತು.
ಕಳಸ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕಳಸ ಹಾಗೂ ಮೂಡಿಗೆರೆ ತಾಲ್ಲೂಕು ಮಟ್ಟದ ಪಂದ್ಯಾಟದಲ್ಲಿ ತಾಲ್ಲೂಕಿನ ವಿವಿದೆಡೆಯಿಂದ 22 ತಂಡಗಳು ಭಾಗವಹಿಸಿದ್ದವು.
ಅಂತಿಮವಾಗಿ ವನದುರ್ಗಾ ಎ 13333 ನಗದು ಮತ್ತು ಟ್ರೋಫಿಯೊಂದಿಗೆ (ಪ್ರಥಮ), ಮಲ್ನಾಡ್ ಸ್ಟಾರ್ಸ್ 6666 ನಗದು ಮತ್ತು ಟ್ರೋಫಿಯೊಂದಿಗೆ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ, ಕಳಸ ಪಿಎಸ್ಐ ಹರ್ಷವರ್ಧನ್ ಮಾಡಿದರು. ವೇದಿಕೆಯಲ್ಲಿ ಹೆಚ್.ಡಿ.ಜ್ವಾಲನಯ್ಯ,ಟೀಮ್ 7 ಸದಸ್ಯರಾದ ಕೆ.ಸಿ.ಮಹೇಶ್, ರಾಜೇಶ್, ಆದರ್ಶ, ಪ್ರಕಾಶ್ ಇದ್ದರು.
ಕಾರ್ಯಕ್ರಮದಲ್ಲಿ ಕಳಸ ಪ್ರೆಂಡ್ಸ್ ಕ್ಲಬ್ನ ವಿಜೇತ್, ಸುಜಿತ್, ಕುಶಾಲ್, ನಿಸ್ವಾರ್ಥ್, ಶಶಾಂಕ್ , ಸುರಕ್ಷಿತ್ ಇತರರು ಇದ್ದರು.