ಕಳಸ ಲೈವ್ ವರದಿ
ಕಳಸದ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಭಾನುವಾರ ತಾಲ್ಲೂಕು ಆಡಳಿತದಿಂದ 153 ನೇ ಗಾಂಧಿ ಜಯಂತಿ ಮತ್ತು 118ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮಾಡಲಾಯಿತು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಗಳ ಆದರ್ಶ ಮತ್ತು ತತ್ವಗಳ ಬಗ್ಗೆ ಕಳಸ ತಹಶೀಲ್ದಾರ್ ನಂದ ಕುಮಾರ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಿರಸ್ಥೆದಾರ್ ಶ್ರೀಮತಿ ಸುದಾ, ರೆವಿನ್ಯೂ ಇನ್ಸ್ಪೆಕ್ಟರ್ ಅಜ್ಜೇಗೌಡ, ವಿಎ ಗಳಾದ ಪ್ರಸನ್ನ, ಕವನ, ಮೆಹಬೂಬ್, ಪ್ರದೀಪ್, ಸರಿತ, ಕೆಪಿಎಸ್ ಉಪ ಪ್ರಾಂಶುಪಾಲ ಶಿವಕುಮಾರ್ ಶಿಕ್ಷಕರಾದ ಸಂದೇಶ್, ಶೃಂಗೇಶ್, ಶಿವಕುಮಾರ್ ಇದ್ದರು.