ಕಳಸ ಲೈವ್ ವರದಿ
ಕಳಸ ಮನ್ವಂತರ ಬಳಗದಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
ಕಳಸ ಮುಖ್ಯ ರಸ್ತೆಯಿಂದ ಬೆಳಿಗ್ಗೆ ಪ್ರಾರಂಭಗೊಂಡ ಸ್ವಚ್ಚತಾ ಆಂದೋಲನ ಕುದುರೆಮುಖ ರಸ್ತೆಯ ಕಾರಗದ್ದೆ ನೂಜಿ ಪ್ರಯಾಣಿಕರ ತಂಗುದಾನದವರೆಗೆ ಮುಖ್ಯ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬಾಟಲಿಗಳನ್ನು ಹೆಕ್ಕಿ ಸ್ವಚ್ಚ ಮಾಡಿದರು.ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಸಿಬ್ಬಂದಿಗಳು ಆಂದೋಲನಕ್ಕೆ ಸಾಥ್ ನೀಡಿದರು.
ರಾಷ್ಟ್ರೀಯ ಅಭಯಾರಣ್ಯ ಪ್ರವೇಶಿಸುವ ಬಸರಿಕಲ್ ಗೇಟ್ ವರೆಗೆ ಸ್ವಚ್ಚತಾ ಆಂದೋಲನ ಹಮ್ಮಿಕೊಂಡಿದ್ದು, ಇಂದು ಕಾರಗದ್ದೆ ತನಕ ಮಾಡಿದ್ದೇವೆ. ಶಾಲೆಗಳು ಪ್ರಾರಂಭವಾದ ಕೂಡಲೇ ಸಂಸೆ ಶಾಲೆಯ ಮಕ್ಕಳು ಸ್ವಚ್ಚತಾ ಆಂದೊಲನಕ್ಕೆ ಕೈಜೋಡಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಅವರೊಂದಿಗೆ ನಮ್ಮ ಗುರಿಯನ್ನು ಮುಟ್ಟಲಿದ್ದೇವೆ ಎಂದು ತಂಡದ ಅಧ್ಯಕ್ಷ ಪ್ರಶಾಂತ್ ಹೆಚ್.ಆರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಪಿಡಿಒ ಕವೀಶ್, ಮನ್ವಂತರ ತಂಡದ ಸದಸ್ಯರುಗಳಾದ ಶ್ರೀಕಾಂತ್, ಮುರುಳಿ, ಚೇತನ್, ಸಂತೋಷ್, ವಿನಯ ಶೆಟಿ, ಅಕ್ಷಯ್, ಅಭಿ, ಹರೀಶ, ವಿಘರಾಜ್, ಮಹಾವೀರ, ಜಯಪ್ರಕಶ್, ಗಣೇಶ, ಪ್ರಶಾಂತ ನೆಲ್ಲಿಬೀಡು ಇದ್ದರು.