ಕಳಸ ಲೈವ್ ವರದಿ
ಕಳಸ ತಾಲೂಕಿನ ಮಹಿಳಾ ಸ್ವಸಹಾಯ ಸಂಘಗಳ ಸಂಜೀವಿನಿ ಒಕ್ಕೂಟಕ್ಕೆ ಒಟ್ಟು 99 ಲಕ್ಷ ರೂ ಮಂಜೂರು ಆಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಕಳಸದಲ್ಲಿ ಶನಿವಾರ ನಡೆದ ಸಂಜೀವಿನಿ ಒಕ್ಕೂಟ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಂ ಪಿ ಕುಮಾರಸ್ವಾಮಿ ಅವರು ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಘಗಳಿಗೆ ಒಟ್ಟು 99 ಲಕ್ಷ ಹಣ ಮಂಜೂರಾಗಿದ್ದು, ಕಳಸ ಪಂಚಾಯಿತಿ ವ್ಯಾಪ್ತಿಯ ಸಂಘಗಳಿಗೆ 28.5 ಲಕ್ಷ, ಹೊರನಾಡು ಗ್ರಾಮಕ್ಕೆ 7.5ಲಕ್ಷ, ತೋಟದೂರು ಗ್ರಾಮಕ್ಕೆ 21 ಲಕ್ಷ, ಮರಸಣಿಗೆ ಗ್ರಾಮಕ್ಕೆ 9 ಲಕ್ಷ. ಇಡಕಣಿ ಗ್ರಾಮಕ್ಕೆ 12 ಲಕ,್ಷ ಸಂಸೆ ಗ್ರಾಮಕ್ಕೆ 21 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
ಈ ಅನುದಾನವನ್ನು ಸದ್ಯದಲ್ಲೇ ಗಣ್ಯರೊಬ್ಬರ ಉಪಸ್ಥಿತಿಯಲ್ಲಿ ವಿತರಣೆ ಮಾಡಲಾಗುತ್ತದೆ ಎಂದರು. ತಾಲೂಕಿನಲ್ಲಿ ನಿರ್ಮಾಣ ಆಗುತ್ತಿರುವ ಸೇತುವೆಗಳ ಪಟ್ಟಿ ಓದಿದ ಅವರು ಎಲ್ಲ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಕಾಮಗಾರಿ ಕೂಡ ಪ್ರಗತಿಯಲ್ಲಿ ಇದೆ ಎಂದರು.
ಕಳಸ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸುಜಯಾ ಸದಾನಂದ, ಸದಸ್ಯರಾದ ರಂಗನಾಥ್. ಕಾರ್ತಿಕ್ ಶಾಸ್ತ್ರಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಕಾಶ್, ಒಕ್ಕೂಟದ ಅಧ್ಯಕ್ಷೆ ಸೌಮ್ಯ, ತಾಲೂಕು ವ್ಯವಸ್ಥಾಪಕಿ ಶಾಲಿನಿ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷ ಶೇಷಗಿರಿ, ಮಾಜಿ ಪಂಚಾಯಿತಿ ಅಧ್ಯಕ್ಷೆ ರತಿರವೀಂದ್ರ, ಜಯಂತಿ, ಜ್ಯೋತಿ, ವಿಜಯಲಕ್ಷ್ಮೀ, ಪವಿತ್ರ ಇತರರು ಇದ್ದರು.