ಕಳಸ ಲೈವ್ ವರದಿ
ತನ್ನ ಮನೆಗೆ ಹೋಗಲು ರಸ್ತೆ ನಿರ್ಮಿಸಿಕೊಡಿ ಎಂದು ಕಳೆದ ಕೆಲ ವರ್ಷಗಳಿಂದ ಬೇಡಿಕೆ ಇಟ್ಟಿದ್ದ ವೃದ್ಧೆ ವೆಂಕಮ್ಮ ಕೊನೆಗೂ ರಸ್ತೆ ಕನಸು ಕೈಗೂಡದೆ ಕನಸು ಅವರ ಸಾವಿನೊಂದಿಗೆ ಕಮರಿಹೋಗಿದೆ.
ಕಳೆದ ಎಂಟು ದಿನಗಳ ಹಿಂದೆ ಕಳಸದ ಗಂಟೆಮಕ್ಕಿ ನಿವಾಸಿ ಆಗಿದ್ದ ವೆಂಕಮ್ಮ(86) ಅನಾರೋಗ್ಯಕ್ಕೀಡಾದಾಗ ಅವರ ಮನೆಗೆ ರಸ್ತೆ ಇಲ್ಲದ ಪರಿಣಾಮ ಅವರನ್ನು ಆಸ್ಪತ್ರೆಗೆ ಬಡಿಕೆ ಕಟ್ಟಿ ಹೊತ್ತು ತಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರು ಸೋಮವಾರ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ತನ್ನ ಮನೆ ಸಂಪರ್ಕಕ್ಕೆ ರಸ್ತೆ ಸೌಲಭ್ಯ ಬೇಕು ಎಂದು ಈ ವೃದ್ಧೆ ಹಲವಾರು ಬಾರಿ ಜಿಲ್ಲಾಧಿಕಾರಿಯಿಂದ ಹಿಡಿದು ಕಂದಾಯ ಸಚಿವರವರೆಗೆ ಅರ್ಜಿ ಸಲ್ಲಿಸಿದ್ದರೂ ಇವರ ಮನೆಗೆ ರಸ್ತೆ ಬಾಗ್ಯ ದೊರಕಿರಲಿಲ್ಲ. ಕೊನೆಗೂ ವೆಂಕಮ್ಮ ಕಂಡಿದ್ದ ರಸ್ತೆ ಕನಸು ಅವರ ಸಾವಿನೊಂದಿಗೆ ಕನಸಾಗಿಯೇ ಉಳಿದು ಹೋಗಿದೆ.