ಕಳಸ ಲೈವ್ ವರದಿ
ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವತಿಯಿಂದ 34ನೇ ವರ್ಷದ ಶ್ರೀ ದುರ್ಗಾಪರಮೇಶ್ವರಿ ಶರನ್ನವರಾತ್ರಿ ಮಹೋತ್ಸವಕ್ಕೆ ಸಕಲ ಅಂತಿಮ ಹಂತದ ಸಿದ್ದತೆಗಳು ನಡೆಯುತ್ತಿದೆ.
ಸೆಷ್ಟಂಬರ್ 26 ರಿಂದ ಅಕ್ಕೋಬರ್ 5ರ ವರೆಗೆ ಕಳಸ ದುರ್ಗಾ ಮಂಟಪದಲ್ಲಿ ನಡೆಯುವ ದುರ್ಗಾ ಪೂಜಾ ಮಹೋತ್ಸವಕ್ಕೆ ತಳಿರು ತೋರಣ, ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗಿದೆ. ದುರ್ಗಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆಗೆ ಸಿದ್ದಪಡಿಸಲಾಗಿದೆ.
ನವರಾತ್ರಿಯ ಮೊದಲನೆ ದಿನ ಸೆ 26ರಂದು ಕಲಶೇಶ್ವರಸ್ವಾಮಿಗೆ ಶತರುದ್ರಾಭಿಷೇಕ, ಗಿರಿಜಾಂಬಾ ದೇವಸ್ಥಾನದಲ್ಲಿ ಸಾನಿಧ್ಯ ಕಲಶಾಭಿಷೇಕ, ಸಪ್ತಶತೀ ಪಾರಾಯಣ, ಬೆಳಿಗ್ಗೆ 10 ಗಂಟೆಗೆ ಗಣಹೋಮ, 11 ಗಂಟೆಗೆ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ, ಸಂಜೆ 7-30ರಿಂದ ಭವತಿನೃತ್ಯ ತಂಡ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.