ಕಳಸ ಲೈವ್ ವರದಿ
ಪ್ರವಾಸಿಗರು ಹೆಚ್ಚಾಗಿ ಬೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಮೈದಾಡಿಯು ಒಂದು. ಆದರೆ ಈ ಸ್ಥಳಕ್ಕೆ ಹೋಗುವ ಬಾಗಿಲಿನಲ್ಲಿಯೇ ಕಸವು ಪ್ರವಾಸಿಗರನ್ನು ಸ್ವಾಗತಿಸುವಂತಿದೆ.
ಕಸವನ್ನು ಹಾಕಲು ಇಲ್ಲಿ ಸುಂಕಸಾಲೆ ಗ್ರಾಮ ಪಂಚಾಯಿತಿ ತೊಟ್ಟಿಯನ್ನು ಇಟ್ಟಿದ್ದಾರೆ. ಆದರೆ ಈ ತೊಟ್ಟಿ ಕಸದಿಂದ ತುಂಬಿ ತುಳುಕುತ್ತಿದ್ದರೂ ಕೂಡ ಪಂಚಾಯಿತಿ ಕಸವನ್ನು ವಿಲೇವಾರಿ ಮಾಡುತ್ತಿಲ್ಲ.
ಈ ಸ್ಥಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಬೇಟಿ ನೀಡುತ್ತಿದ್ದು, ಇಲ್ಲಿಯ ಸ್ವಚ್ಚತೆಯ ಬಗ್ಗೆ ಸ್ವತಃ ಪ್ರವಾಸಿಗರೇ ಪ್ರಶ್ನೆ ಮಾಡುವಂತಾಗಿದೆ. ಸುಂಕಸಾಲೆ ಗ್ರಾಮ ಪಂಚಾಯಿತಿಯು ಕೂಡಲೇ ಕಸವನ್ನು ವಿಲೇವಾರಿ ಮಾಡಬೇಕು ಎಂದು ಸ್ಥಳಿಯರು ಕೇಳಿಕೊಳ್ಳುತ್ತಿದ್ದಾರೆ.