ಕಳಸ(ಕಳಸ ಲೈವ್ ವರದಿ)
ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಬಡ್ಡಿ ಮತ್ತು ಎತ್ತರ ಜಿಗಿತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎರಡು ದಿನಗಳ ಕಾಲ ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯಾಟದಲ್ಲಿ ಮೂಡಿಗೆರೆ ತಂಡವನ್ನು ಪ್ರತಿನಿಧಿಸಿ ಎರಡನೇ ಸ್ಥಾನ ಗಳಿಸಿದ್ದಾರೆ.
ಇದರೊಂದಿಗೆ ಕಬಡ್ಡಿ ಪಂದ್ಯಾಟದಲ್ಲಿ ಅಮಿತ್, ಲತೀಶ್ ಮತ್ತು ಮುಜಾವಂಬಿಲ್ ರಾಜ್ಯ ಮಟ್ಟದಲ್ಲಿ ಆಡಲಿದ್ದಾರೆ. ಅಲ್ಲದೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ ಮಂಜುನಾಥ್ ರಾಜ್ಯ ಮಟ್ಟದಲ್ಲಿ ಆಡಲಿದ್ದಾರೆ.
ಇವರಿಗೆ ಗಣೇಶ್ ಮತ್ತು ಸುದರ್ಶನ್ ಕೋಚ್ ನೀಡಿದ್ದರು.