ಕಳಸ(ಕಳಸ ಲೈವ್)ವರದಿ
ಸರ್ಕಾರಿ ಪ್ರೌಢ ಶಾಲೆ ಅಂಗಡಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಹಲವು ವಿಬಾಗಗಳಲ್ಲಿ ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಭಾವಗೀತೆ – ಪ್ರಣತಿ ಪಿ ಡೊಂಗ್ರೆ, ಗಜಲ್- ಪ್ರಣಮ್ಯ ಪಿ ಡೋಂಗ್ರೆ, ರಂಗೋಲಿ – ಅಕ್ಷಯ, ಛದ್ಮವೇಷ – ವೈಷ್ಣವಿ, ಹಿಂದಿ ಭಾಷಣ – ಸಾನಿಕ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಚಿತ್ರಕಲಾ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ವಿತರಿಸಲಾಯಿತು.