ಕಳಸ:(ಕಳಸ ಲೈವ್ ವರದಿ)
ಕಳಸ ದುರ್ಗಾ ಮಂಟಪದಲ್ಲಿ 34 ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಮಹೋತ್ಸವವು ಸೆ 26 ರಿಂದ ಆ 5 ರ ವರೆಗೆ ನಡೆಯಲಿದೆ.
ಅತಿವೃಷ್ಠಿ, ಕೊರೋನ ಹಿನ್ನಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಳವಾಗಿ ನಡೆದಿದ್ದ ದುರ್ಗಾಪೂಜಾ ಮಹೋತ್ಸವ ಈ ಬಾರಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
26-09-2022ನೇ ಸೋಮವಾರ ಬೆಳಿಗ್ಗೆ 10-00ಕ್ಕೆ : ಗಣಹೋಮ ಬೆಳಿಗ್ಗೆ 11-10ಕ್ಕೆ ಶ್ರೀ ದುರ್ಗಾದೇವಿಯ “ವಿಗ್ರಹ ಪ್ರತಿಷ್ಟಾಪನೆ” ಸಂಜೆ 7.15ಕ್ಕೆ ಭವತಿನೃತ್ಯ ತಂಡ, ಬೆಂಗಳೂರು ಇವರಿಂದ “ಭರತನಾಟ್ಯ”
27-09-2022ನೇ ಮಂಗಳವಾರ ಸಂಜೆ 7-30ರಿಂದ ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ (ರಿ.) ಕಲರ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನ ಸಂಭ್ರಮ” ಸಹಪ್ರಾಯೋಜಕರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ, ಕಳಸ.
28-09-2022ನೇ ಬುಧವಾರ ಸಂಜೆ 7-30ರಿಂದ ‘ತೆಲಿಕೆದ ಬರ್ಸ ತೆಲಿಕೆದ ತೆನಾಲಿ ತಂಡ, ಕಾರ್ಕಳ ಇವರಿಂದ ‘ತೆಲಿಕೆದೊಟ್ಟುಗ್ ನಲಿಕೆ’.
29-09-2022ನೇ ಗುರುವಾರ ಸಂಜೆ 7-30ರಿಂದ ಸಂಗೀತ ಕಲಾವೃಂದ, ಕಳಸ ಇವರಿಂದ “ರಸಮಂಜರಿ ಕಾರ್ಯಕ್ರಮ”
30-09-2022ನೇ ಶುಕ್ರವಾರ ರಾತ್ರಿ 7-30ರಿಂದ ವಿಜಯಕುಮಾರ್, ಕೊಡಯಾಲಬೈಲ್ ಇವರ ಕಲಾ ನಿರ್ದೇಶನದ ಹಾಗೂ ಕಲಾಸಂಗಮ ಇವರು ಅರ್ಪಿಸುವ ಹಾಸ್ಯಮಯ ತುಳು ನಾಟಕ “ಶಿವದೂತೆ ಗುಳಿಗೆ”.
01-10-2022ನೇ ಶನಿವಾರ ರಾತ್ರಿ 7-30ರಿಂದ ಕಳಸದ ನಾಟ್ಯ ವಿನೋದ ತಂಡದಿಂದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಾಟ್ಯ ವಿನೋದ-ಸೀಸನ್4.
02-10-2022ನೇ ಭಾನುವಾರ ರಾತ್ರಿ 7-30ರಿಂದ ಎಂ. ಜೆ. ಫ್ಯಾನ್ಸ್ ಗ್ರೂಪ್, ಕಲ್ಮಕ್ಕಿ ಇವರಿಂದ “ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ”
03-10-2022ನೇ ಸೋಮವಾರ ದುರ್ಗಾಹೋಮ, ತ್ರಿಮೂರ್ತಿಪೂಜೆ, ವೃಷಭವಾಹಿನಿ ಹೂವಿನಪೂಜೆ, ಬೆಳಿಗ್ಗೆ 10-30ರಿಂದ “ಸೌಂದರ್ಯ ಲಹರಿ”
ಶ್ರೀಮತಿ ರಾಜಲಕ್ಷ್ಮಿ ಬಿ. ಜೋಷಿ, ಶ್ರೀ ಕ್ಷೇತ್ರ ಹೊರನಾಡು ಮತ್ತು ಸಂಗಡಿಗರಿಂದ ಮಧ್ಯಾಹ್ನ 12-30ರಿಂದ : ಅನ್ನ ಸಂತರ್ಪಣೆ. ರಾತ್ರಿ 7-00ರಿಂದ : ಶ್ರೀ ರಂಗಪೂಜೆ, 8-00ರಿಂದ ಕು| ಹಾರಿಕಾ ಮಂಜುನಾಥ ಬಾಲವಾಗಿ, ಬೆಂಗಳೂರು ಇವರಿಂದ“ಭಾರತೀಯ ಪರಂಪರೆಯ ವೈಭವ”
04-10-2022ನೇ ಮಂಗಳವಾರ ರಾತ್ರಿ 7-30ರಿಂದ ಶಿವಾನಿ ಆರ್ಕೇಸ್ಟ್ರಾ, ಮಂಗಳೂರು ಇವರಿಂದ “ರಸಮಂಜರಿ ಆರ್ಕೆಸ್ಟ್ರಾ’’ ಪ್ರಾಯೋಜಕರು : ಟೀಂ 7, ಕಳಸ.
05-10-2022ನೇ ಬುಧವಾರ ಮಧ್ಯಾಹ್ನ 3-00ರಿಂದ ಕಳಸದ ರಾಜಬೀದಿಯಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ದೇವಿಯ ವೈಭವಯುತ ಮೆರವಣಿಗೆಯು ಕಳಸದ ರಾಜಬೀದಿಯಲ್ಲಿ ಸಾಗಿ ಕೋಟಿತೀರ್ಥದಲ್ಲಿ ಶ್ರೀ ದೇವಿಯ ತೆಪ್ಪೋತ್ಸವ ನಂತರ ಶ್ರೀ ದೇವಿಯ ವಿಗ್ರಹ ವಿಸರ್ಜನೆ.