ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪೋಷನ್ ಅಭಿಯಾನ ಯೋಜನೆಯಡಿಯಲ್ಲಿ ಅಂಗನವಾಡಿ ಮಕ್ಕಳಿಗೆ ಬಾಲ ಅಡುಗೆ ಭಟ್ಟ ಸ್ಪರ್ಧೆಯನ್ನು ಕಳಸ ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ನಡೆಸಲಾಯಿತು.
ಈ ಸ್ಪರ್ಧೆಯಲ್ಲಿ ಕಳಸ ಸುತ್ತಮುತ್ತಲಿನ ಹನ್ನೊಂದು ಅಂಗನವಾಡಿ ಕೇಂದ್ರದ ಮಕ್ಕಳು ಪಾಲ್ಗೊಂಡಿದ್ದರು. ಬಾಲ ಅಡುಗೆ ಭಟ್ಟ ಸ್ಪರ್ಧೆಯಲ್ಲಿ 30 ಪುಟಾಣಿ ಮಕ್ಕಳು ಭಾಗವಹಿಸಿದ್ದರು.
ಮಕ್ಕಳ ತಾಯಂದಿರು ಬಗೆ ಬಗೆಯ ತಿಂಡಿ ತಿನಸುಗಳನ್ನು ತಯಾರು ಮಾಡಿ ತಂದಿದ್ದರು. ಅಂತಿಮವಾಗಿ ಗೆದ್ದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.