ಕಳೆದ ಕೆಲ ದಿನಗಳಿಂದ ಕಳಸದ ಕೆಲವೆಡೆ ಕಾಣಿಸಿಕೊಂಡಿದ್ದ ಆನೆಗಳು ಈಗ ಅಬ್ಬುಗುಡಿಗೆಯಲ್ಲಿ ವಾಸ್ತವ್ಯ ಹೂಡಿವೆ.
ಸಾಕಷ್ಟು ಕೃಷಿ ಭೂಮಿಯನ್ನು ಹಾಳು ಮಾಡಿರುವ ಆನೆಗಳ ಉಪಟಳ ಮತ್ತೆ ಮುಂದುವರೆದಿದೆ.ಶುಕ್ರವಾರ ಬೆಳಗ್ಗಿನ ಜಾವ ಅಬ್ಬುಗುಡಿಗೆ ಪ್ರದೇಶಗಳಲ್ಲಿ ಆನೆಯು ಕಾಣಿಸಿಕೊಂಡಿದ್ದು, ಬಾಳೆ, ಅಡಿಕೆ ಗಿಡಗಳನ್ನು ತಿಂದು ದ್ವಂಸ ಮಾಡಿವೆ.
ಸೂರುಮನೆ ಜಲಪಾತದದ ಬಳಿಯು ಆನೆಯು ಸಂಚರಿಸಿದ ಕುರುಹುಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಜಲಪಾತ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.