ಹೊರನಾಡು ದೇವಸ್ಥಾನಕ್ಕೆ ತೆರಳುವ ರಸ್ತೆಯ ಬಾಮಿ ಅಗಡಿ ಬಳಿಯ ಸೇತುವೆಗೆ ಹಾನಿಯಾಗಿದ್ದು, ರಸ್ತೆಯ ಒಂದು ಭಾಗ ಕುಸಿಯತೊಡಗಿದೆ.
ಕಳಸ – ಹೊರನಾಡು ಮುಖ್ಯ ರಸ್ತೆಯ ಬಾಮಿ ಅಗಡಿ ಬಳಿ ಹರಿಯುವ ಹಳ್ಳಕ್ಕೆ ಸೇತುವೆ ಕಟ್ಟಲಾಗಿದೆ.ಈ ಸೇತುವೆಯ ಎರಡೂ ಬದಿಯೂ ನೀರು ಹರಿದು ರಸ್ತೆ ಕುಸಿಯುತ್ತಿದೆ. ಅಲ್ಲದೆ ಸೇತುವೆಗೂ ಹಾನಿಯಾಗಿದೆ.
ಪ್ರತಿನಿತ್ಯ ಹೊರನಾಡು ದೇವಸ್ಥಾನಕ್ಕೆ ನೂರಾರು ವಾಹನಗಳು ತೆರಳುತ್ತಿದ್ದು, ಅಲ್ಲದೆ ಹಲವು ಹಳ್ಳಿಗಳ ನೂರಾರು ಕುಟುಂಬಗಳು ಇದೇ ರಸ್ತೆಯ ಮೂಲಕ ತಮ್ಮ ಊರುಗಳಿಗೆ ತೆರಳಬೇಕಾಗಿದೆ.
ಆದ್ದರಿಂದ ರಸ್ತೆ ಕುಸಿಯುತ್ತಿರುವ ಪ್ರದೇಶಕ್ಕೆ ಆದಷ್ಟು ಶೀಘ್ರದಲ್ಲಿ ತಡೆಗೋಡೆಯನ್ನು ಕಟ್ಟಿ ರಸ್ತೆಯನ್ನು ಉಳಿಸಿಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.