ಶಿಕ್ಷಕರ ದಿನಾಚರಣೆಯ ಅಂಗವಾಗಿ ಮನ್ವಂತರ ಬಳಗ ಕಳಸ (ರಿ) ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಸಹ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು ೨೫ ವರ್ಷಗಳಿಂದ ಅನನ್ಯ ಸೇವೆ ಸಲ್ಲಿಸುತ್ತಾ ಬಂದಿರುವ ಸಂಸ್ಕೃತ ಉಪನ್ಯಾಸಕರಾದ ಶಿವರಾಮ ರವರಿಗೆ ಸಂಸ್ಕೃತ ರತ್ನ ಎಂಬ ಬಿರುದು ನೀಡಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಮನ್ವಂತರ ಬಳಗದ ಅಧ್ಯಕ್ಷರಾದ ಪ್ರಶಾಂತ ಹೆಚ್ ಆರ್ ಕಾರ್ಯದರ್ಶಿಯಾದ ಶ್ರೀಕಾಂತ್ ಪಿ. ಸಂಘಟನಾ ಕಾರ್ಯದರ್ಶಿ ಮುರಳಿಧರ ಹಾಗೂ ಸುರೇಶ, ಸಂತೋಷ ಕೆ.ಸಿ. ಜಯಪ್ರಕಾಶ್ ಮತ್ತಿತರಿದ್ದರು.