ಬ್ರಹ್ಮ ಶ್ರೀ ನಾರಾಯಣ ಗುರುಗಳ 168ನೇ ಜಯಂತೋತ್ಸವವನ್ನು ಕಳಸ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದಿಂದ ಭಾನುವಾರ ಆಚರಿಸಲಾಯಿತು.
ಕಳಸ ಪಟ್ಟಣಕ್ಕೆ ಆಗಮಿಸಿದ್ದ ನಾರಾಯಣ ಗುರುಗಳ ಸಂದೇಶ ಸಾರುವ ರಥವನ್ನು ಸಮಾಜದ ಬಾಂಧವರು ಸ್ವಾಗತಿಸಿದರು.
ಗುರುಗಳ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಾಸು ಪೂಜಾರಿ ಮಾಡಿದರು.
ಈ ಸಂದರ್ಭದಲ್ಲಿ ಕಳಸ ಬಿಲ್ಲವ ಸಂಘದ ಅಧ್ಯಕ್ಷ ಮಂಜಪ್ಪ ಪೂಜಾರಿ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸದಸ್ಯ ಸಂಜೀವ, ಎಂ.ಎ.ಶೇಷಗಿರಿ, ಶ್ರೀನಿವಾಸ, ಚಂದ್ರಶೇಖರ, ರವಿ ಸುವರ್ಣ, ರಾಮಚಂದ್ರ ಇದ್ದರು.