ಕಳಸ ಪಟ್ಟಣದ ಕಲ್ಲುಬಾವಿ ಸಮೀಪ ಪ್ರಕಾಶ್ ಕುಮಾರ್ ಮನೆಯಲ್ಲಿ ಬಿಡಾಡಿ ದನವೊಂದು ಭಾನುವಾರ ಬೆಳಗ್ಗಿನ ಜಾವ ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿದೆ.
ತುಂಬು ಗಬ್ಬವಿದ್ದ ದನ ಶನಿವಾರ ರಾತ್ರಿ ಪ್ರಕಾಶ್ ಅವರ ಮನೆಯ ಹತ್ತಿರ ಬಂದಿತ್ತು. ಅಲ್ಲೇ ರಾತ್ರಿ ಆಶ್ರಯ ಪಡೆದ ದನ ಬೆಳಿಗ್ಗೆ ಕರು ಹಾಕಿದೆ.
ಪ್ರಕಾಶ್ ಅವರ ತಾಯಿ ಜಾನಕಿಯವರು ಕರು ಮತ್ತು ದನವನ್ನು ಆರೈಕೆ ಮಾಡುತ್ತಿದ್ದಾರೆ.