ಕಳಸ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಶನಿವಾರ ಜೆ.ಇ.ಎಮ್ ಪ್ರೌಢಶಾಲೆಯ ಆತಿಥ್ಯದಲ್ಲಿ ನಡೆಯಿತು.
ಕಳಸ ಎಜುಕೇಶನ್ ಸೊಸೈಟಿ ಕಳಸ ಇದರ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಳಸ ಗ್ರಾಮಪಂಚಾಯಿತಿಯ ಅಧ್ಯಕ್ಷರಾದ ಸುಜಯ ಸದಾನಂದ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಕಳಸ ಎಜುಕೇಶನ್ ಸೊಸೈಟಿ ಕಳಸ ಇದರ ಕಾರ್ಯದರ್ಶಿ ಶ್ರೀಯುತ ಗೋಪಿನಾಥ್ ಪೈ ರವರು ಉಪಸ್ಥಿತರಿದ್ದರು.
ಕಳಸ ತಾಲ್ಲೂಕಿನ ಸುಮಾರು ಹತ್ತು ಪ್ರೌಢ ಶಾಲೆಗಳಿಂದ ಸುಮಾರು 300 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಜೆ.ಇ.ಎಮ್ ಶಾಲೆಯು ಅತಿ ಹೆಚ್ಚು ಸ್ಪರ್ಧೆಗಳಲ್ಲಿ ಬಹುಮಾನವನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.