ಸಂಸೆಯಲ್ಲಿ ಬುಧವಾರ ಮತ್ತು ಗುರುವಾರ ನಡೆದ ಮೂಡಿಗೆರೆ ತಾಲ್ಲೂಕಿನ ಬಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಕಳಸ ಜೆ.ಇ.ಎಮ್ ಪ್ರೌಢಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಸುಮಾರು 13 ಶಾಲೆಗಳು ಭಾಗವಹಿಸಿದ್ದು, ಜೆ.ಇ.ಎಮ್ ಶಾಲೆಯ ಮಹಿತ್ ಆರ್ ಹೆಬ್ಬಾರ್ 100, 200 ಮೀಟರ್ ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಬಾಲಕರ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆದರೆ, 13ಶಾಲೆಗಳ ಪೈಕಿ ಜೆ.ಇ.ಎಮ್ ಪ್ರೌಢಶಾಲೆ ಕಳಸವು ಸತತವಾಗಿ ಮೂರನೇ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.