ಮೂಡಿಗೆರೆ ತಾಲ್ಲೂಕಿನ ಊರುಬಗೆ ಗ್ರಾಮದ ಮುಖ್ಯ ರಸ್ತೆಗೆ ಬಂದ ಕಾಡಾನೆಯೊಂದು ರಸ್ತೆಯಲ್ಲಿ ತೆರಳುತ್ತಿದ್ದ ಅರ್ಜುನ್ (48) ಎಂಬ ವ್ಯಕ್ತಿಯನ್ನು ತುಳಿದು ಕೊಂದು ಹಾಕಿದೆ
ಗುರುವಾರ ಸಂಜೆ ತೋಟದಲ್ಲಿ ಕೆಲಸ ಮುಗಿಸಿ ಮಾಲೀಕರ ಮನೆಗೆ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಾಫಿ ತೋಟದಿಂದ ಏಕಾಏಕಿ ಬಂದ ಕಾಡಾನೆ ಕಾರ್ಮಿಕ ಅರ್ಜುನ್ ಮೇಲೆ ದಾಳಿ ನಡೆಸಿದೆ. ಅವರಿಗೆ ಕಿವಿ ಕೇಳದಿರುವುದರಿಂದ ಕಾಡಾನೆ ರಸ್ತೆಗೆ ಬಂದಿದ್ದನ್ನು ಗಮನಿಸಿರಲಿಲ್ಲವೆನ್ನಲಾಗಿದೆ. ಕಾಡಾನೆ ವ್ಯಕ್ತಿಯನ್ನು ತುಳಿದು ಕೊಂದು ಹಾಕಿದ ಸುದ್ದಿ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಜನರನ್ನು ನೋಡಿದ ಕಾಡಾನೆ ಮತ್ತೆ ರಸ್ತೆಗೆ ಬಂದಿದೆ ಆಗ ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿ ಕಾಡಾನೆಯಿಂದ ತಪ್ಪಿಸಿಕೊಂಡಿದ್ದಾರೆ.