ಕಳಸ ಹಳುವಳ್ಳಿ ಲಲಿತಾದ್ರಿ ಎಂಬಲ್ಲಿ ಎರಡು ಆನೆಗಳು ತೋಟಕ್ಕೆ ನುಗ್ಗಿ ಸಾಕಷ್ಟು ಕೃಷಿಯನ್ನು ನಾಶ ಮಾಡಿದೆ.
ಲಲಿತಾದ್ರಿಯ ನಟೇಶ ಎಂಬುವವರಿಗೆ ಸೇರಿದ ತೋಟಕ್ಕೆ ಮಂಗಳವಾರ ರಾತ್ರಿ ಎರಡು ಆನೆಗಳು ತೋಟಕ್ಕೆ ನುಗ್ಗಿ ಬೆಳೆದು ನಿಂದಿದ್ದ ಸುಮಾರು 50ಕ್ಕೂ ಹೆಚ್ಚು ಅಡಕೆ ಮರಗಳೊಂದಿಗೆ ಕಾಫಿ, ಬಾಳೆ ಗಿಡಗಳನ್ನು ನಾಶ ಪಡಿಸಿವೆ.
ಅನೆಗಳಲ್ಲದೆ ಕಾಡುಕೋಣ, ಹಂದಿ, ಜಿಂಕೆಗಳು ಹಿಂಡುಗಟ್ಟಲೆ ತೋಟಕ್ಕೆ ಲಗ್ಗೆ ಇಡುತ್ತಿದ್ದು, ಸಾಕಷ್ಟು ಶ್ರಮ ಪಟ್ಟು ಬೆಳೆದ ಕೃಷಿ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಮಲೆನಾಡಿನಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುವುದೇ ಕಷ್ಟದ ಕೆಲಸವಾಗುತ್ತಿದೆ ಎಂದು ನಟೇಶ್ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.