ಹೊರನಾಡು ಅನ್ನಪೂರ್ಣೇಶ್ವರಿ ದರುಶನ ಮುಗಿಸಿ ವಾಪಾಸು ತುಮಕೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕರಡಿಗುಡ್ಡ ಪ್ರಯಾಣಿಕರ ತಂಗುದಾನದ ಸಮೀಪ ಶಿಪ್ಟ್ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಕರಡಿಗುಡ್ಡದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ.ಅದರ ಸಮೀಪವೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಕೂಡ ಇದೆ.ಅದೃಷ್ಟ ವೆಂಬಂತೆ ಯಾವುದೇ ಪ್ರಾಣ ಹಾನಿಗಳು ಸಂಭವಿಸಿಲ್ಲ.
ಇದೇ ಸಂದರ್ಭದಲ್ಲಿ ಹಿರೇಬೈಲು ಅಂಬ್ಯುಲೆನ್ಸ್ ಚಾಲಕ ಶರೀಫ್ ಬಂದಿದ್ದು, ಕಾರನ್ನು ಎಳೆಯಲು ಸಹಕಾರಿಯಾದರು.