ಕಳೆದ ಏಳು ದಿನಗಳಿಂದ ಕಳಸ ಪಟ್ಟಣದ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಪ್ರತಿಷ್ಠಾಪಿದ ಶ್ರೀ ಶಕ್ತಿ ಗಣಪತಿಯನ್ನು ಮಂಗಳವಾರ ಕೋಟಿ ತೀರ್ಥದಲ್ಲಿ ವಿಸರ್ಜಿಸಲಾಯಿತು.
ಇದಕ್ಕಿಂದ ಮುಂಚಿತವಾಗಿ ಶ್ರೀ ವಿನಾಯಕನ ಮೂರ್ತಿಯನ್ನು ಕಳಸದ ಮುಖ್ಯ ರಥ ಬೀದಿಯಲ್ಲಿ ಮೆರವಣಿಗೆಯ ಮೂಲಕ ಕೋಟೆಹೊಳೆಯ ಕೋಟಿ ತೀರ್ಥಕ್ಕೆ ತರಲಾಯಿತು.
ಮೆರವಣಿಗೆಯ ದಾರಿಯುದ್ದಕ್ಕೂ ಭಕ್ತಾದಿಗಳು ಗಣಪನಿಗೆ ಹಣ್ಣುಕಾಯಿ ಅರ್ಪಿಸಿದರು.