ಕಳಸ ಕಲ್ಮಕ್ಕಿಯ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ಶುಕ್ರವಾರ ಗಣಪತಿ ಹೋಮ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಶುಕ್ರವಾರ ಕಲ್ಮಕ್ಕಿಯ ಗಣಪತಿ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.ಗಣಹೋಮ ನಿಮಿತ್ತ ಗಣಪತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ಹೋಮದ ಪೂರ್ಣಾಹುತಿ ನಂತರದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಜಾತಿ ಮತ ಬೇದವಿಲ್ಲದೆ ಸೌಹಾರ್ದತೆಯಿಂದ ಆಚರಿಸುವ ಕಲ್ಮಕ್ಕಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಎಂ.ಜೆ.ಡ್ಯಾನ್ಸ್ ಗ್ರೂಪ್ ಕಲ್ಮಕ್ಕಿ ತಂಡದಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕ ಹಿರೇಬೈಲು ಶರೀಫ್ ಅವರನ್ನು ಸನ್ಮಾನಿಸಲಾಯಿತು.
ಶನಿವಾರ ಸಂಜೆ ಗಂಟೆ 4 ರಿಂದ ನೃತ್ಯ ಸ್ಪರ್ಧೆ ನಡೆಯಲಿದೆ.