ಭಗವದ್ಗೀತಾ ಕಂಠಪಾಠ ವಿಜೇತರಿಗೆ ರಜತಪದಕ
ಕಳಸದ ಸಾರ್ವಜನಿಕ ಶ್ರೀ ಶಕ್ತಿಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ರಜತ ಪದಕದೊಂದಿಗೆ ಗುರುವಾರ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ವೇಷಭೂಷಣ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಹಾಗೂ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಹಾಗೂ ಅಂತಿಮ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೂ ರಜತಪದಕದೊಂದಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಿರಿಜಾ ಶಂಕರ ಜೋಷಿ, ರಾಘವೇಂದ್ರ ಭಟ್, ಕೆ.ಎಸ್.ಬಾಲಕೃಷ್ಣ, ಕೆ.ಜಿ.ರಾಜಕುಮಾರ್ ಪೈ, ಕೆ.ಸಿ.ಆನಂದ ಇದ್ದರು.