ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ಶ್ರೀ ಗೌರಿ ಗಣೇಶನನ್ನು ಇಟ್ಟು ಪೂಜಿಸಲಾಯಿತು.
ಬುಧವಾರ ಬೆಳಿಗ್ಗೆ ಗಣಪತಿ ಹೋಮ ಹಾಗೂ ಇನ್ನಿತರೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಸರ್ವಾಂಗ ಸುಂದರಿ ಅಮ್ಮನವರ ಬಳಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮೂರು ದಿನಗಳ ಕಾಲ ಇಲ್ಲಿ ಗೌರಿ ಗಣೇಶನನ್ನು ಪೂಜಿಸಿ ನಂತರ ವಿಸರ್ಜಿಸಲಾಗುತ್ತದೆ.