ಕಳಸ 64ನೇ ವರ್ಷದ ಸಾರ್ವಜನಿಕ ಶ್ರೀ ಶಕ್ತಿಗಣಪತಿ ಪೂಜಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ಶಕ್ತಿ ಗಣಪತಿ ಸೇವಾ ಪ್ರತಿಷ್ಠಾನದ ಕಟ್ಟಡದಲ್ಲಿ ಶಕ್ತಿಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಬುಧವಾರ ರಾತ್ರಿ ಪ್ರಭೋಧಿನಿ ಶಾಲಾ ಮಕ್ಕಳಿಂದ ಭಜನೆ ನಡೆಯಲ್ಲಿದ್ದು, ಗುರುವಾರ ಲಕ್ಷ ಪುಷ್ಪಾರ್ಚನೆ, ಮೂಡುಗಣಪತಿ ಸೇವೆ, ರಾತ್ರಿ ವೇಷಭೂಷಣ ಸ್ಪರ್ಧೆ.ಶುಕ್ರವಾರ ಲಕ್ಷದೂರ್ವಾರ್ಚನೆ, ರಾತ್ರಿ ಶಶಿಪ್ರಭಾ ಪರಿಣಯ ಯಕ್ಷಗಾನ, ಶನಿವಾರ ಸಹಸ್ರ ಮೋದಕ ಗಣಪತಿ ಹೋಮ ರಾತ್ರಿ ಪ್ರಬೋಧಿನಿ ಶಾಲಾ ಮಕ್ಕಳಿಂದ ಸಾಂಸ್ಕøತಿ ಕಾರ್ಯಕ್ರಮ, ಭಾನುವಾರ ಮೂಡುಗಣಪತಿ ಸೇವೆ, ರಾತ್ರಿ ರಂಗ ಪೂಜೆ ಸುಗಮ ಸಂಗೀತ. ಸೋಮವಾರ ಸತ್ಯ ಗಣಪತಿ ವೃತ ರಾತ್ರಿ ಭಕ್ತಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ.
ಮಂಗಳವಾರ ಶ್ರೀ ಸ್ವಾಮಿಯ ಭವ್ಯ ಶೋಭಾಯಾತ್ರೆ ಕೋಟಿ ತೀರ್ಥದಲ್ಲಿ ವಿಗ್ರಹ ಜಲಸ್ತಂಭನದೊಂದಿಗೆ ಏಳು ದಿನಗಳ ಕಾಲ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.