ಕಳಸ ತಾಲ್ಲೂಕಿನ ಕಲ್ಮಕ್ಕಿಯಲ್ಲಿ 40 ನೇ ವರ್ಷದ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವಕ್ಕೆ ಅಂತಿಮ ಹಂತದ ಸಕಲ ಸಿದ್ದತೆಗಳು ನಡೆಯುತ್ತಿದೆ.
ರಸ್ತೆಯ ಎರಡು ಕಡೆ ಮುಖ್ಯ ಸ್ವಾಗತ ದ್ವಾರ ನಿರ್ಮಿಸಿ ರಸ್ತೆಯುದ್ದಕ್ಕೂ ತಳಿರು ತೋರಣಗಳನ್ನು ಕಟ್ಟಿ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.
ಐದು ದಿನಗಳ ಕಾಲ ಇಲ್ಲಿ ಬಾಲ ಗಣಪತಿಯನ್ನು ಪೂಜಿಸಲಾಗುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಆಗಸ್ಟ್ 31 ರಂದು ನಿಮ್ಮಿಂದ ನಿಮಗಾಗಿ ಸ್ಪರ್ಧೆ, ಸೆ 1ರಂದು ಕಲ್ಮಕ್ಕಿ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ, ಸೆ 2 ರಂದು ಎಂ.ಜೆ. ಡ್ಯಾನ್ಸ್ ಗ್ರೂಪ್ ಕಲ್ಮಕ್ಕಿ ಇವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ಸೆ 3 ರಂದು ನೃತ್ಯ ಸ್ಪರ್ಧೆ ನಡೆಯಲಿದೆ.
ಸೆ 4 ರಂದು ಗಣಪತಿಯ ವೈಭವಯುತ ಮೆರವಣಿಗೆ ಕೋಟೆಹೊಳೆಯ ಕೋಟಿ ತೀರ್ಥದಲ್ಲಿ ಜಲಸ್ತಂಭನ. ವಿಶೇಷ ಆಕರ್ಷಣೆಯಾಗಿ ಸಿಡಿಮದ್ದು ಪ್ರದರ್ಶನ ಹಾಗೂ ಹುಲಿ ನೃತ್ಯ ಪ್ರದರ್ಶನ ಇರುತ್ತದೆ.