ಕಳಸ ಕಲ್ಮಕ್ಕಿ ಪ್ರಯಾಣಿಕರ ತಂಗುದಾಣವನ್ನು ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚಗೊಳಿಸಲಾಯಿತು.
ಕಳೆದ ಕೆಲ ವರ್ಷಗಳಿಂದ ಈ ತಂಗುದಾಣ ಪಾಳು ಬಿದ್ದು ಹೋಗಿತ್ತು.ಗಿಡ ಗಂಟಿಗಳಿಂದ ಮುಚ್ಚಿಹೋಗಿ ಇಲ್ಲೊಂದು ತಂಗುದಾಣ ಇದೆ ಅನ್ನೋದೆ ಗೊತ್ತಾಗದ ಸ್ಥಿತಿ ಇತ್ತು. ಈ ತಂಗುದಾಣವನ್ನು ಶನಿವಾರ ಸ್ವಚ್ಚಗೊಳಿಸಿ, ಬಣ್ಣ ಬಳಿದು ಪ್ರಯಾಣಿಕರ ಅನುಕೂಲಕ್ಕೆ ಬಿಟ್ಟುಕೊಡಲಾಯಿತು.
ಈ ಬಗ್ಗೆ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಈಗಾಗಲೇ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರಗದ್ದೆ, ಕಲ್ಮಕ್ಕಿ, ಮುನ್ನೂರುಪಾಲ್, ಹಳುವಳ್ಳಿ ತಂಗುದಾಣಗಳನ್ನು ಸ್ವಚ್ಚಮಾಡಲಾಗಿದೆ. ಉಳಿದಿರುವ ಎಲ್ಲಾ ತಂಗುದಾಣಗಳನ್ನು ಪಂಚಾಯಿತಿ ವತಿಯಿಂದ ಸ್ವಚ್ಚ ಮಾಡಲಾಗುತ್ತದೆ ಎಂದು ಹೇಳಿದರು.