ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಹದಿಹರೆಯದ ವಯಸ್ಸಿನ ಮಕ್ಕಳ ಸಮಸ್ಯೆಗಳ ಕುರಿತ ಕಾರ್ಯಗಾರವನ್ನು ಶನಿವಾರ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾದ ಗುರುವಾಯನಕೆರೆ ಶ್ರೀಮತಿ ವಿದ್ಯಾ ನಾಯಕ್ ಅವರು ಇಲ್ಲಿಯ ಪ್ರೌಢ ವಿದ್ಯಾರ್ಥಿನಿಯರಿಗೆ ಕಾರ್ಯಗಾರ ನಡೆಸಿದರು.
ಹದಿ ಹರೆಯದ ವಯಸ್ಸಿನ ಮಕ್ಕಳಿಗೆ ಆಗುವ ಸಮಸ್ಯೆಗಳು ಮತ್ತು ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.