ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ ಕಳಸ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಪ್ರವಾಸ ಕೈಗೊಂಡು, ತಾಲ್ಲೂಕಿನ ಹಲವು ರಾಜಕೀಯ ಮುಖಂಡರುಗಳನ್ನು ಬೇಟಿ ಮಾಡಿದ್ದು, ಮುಂದಿನ ಎಂಎಲ್ಎ ಚುನಾವಣೆಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮನ್ಸೂಚನೆ ಕಾಣುತ್ತಿದೆ.
ಗುರುವಾರ ಕಳಸಕ್ಕೆ ತನ್ನ ಬೆಂಬಲಿಗರ ಜೊತೆ ಬಂದಿದ್ದ ರುದ್ರೇಶ್ ಕಳಸದ ಕೆಲ ಜೆಡಿಎಸ್ ಮುಖಂಡರನ್ನು ಬೇಟಿ ಮಾಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ಕಳಸ ಪದವಿ ಪೂರ್ವ ಕಾಲೇಜಿಗೆ ಬೇಟಿ ನೀಡಿ ಅಲ್ಲಿ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕಾಗಿ ದೇಣಿಗೆ ನೀಡಿದ್ದಾರೆ.
ಸಂಸೆ ಗ್ರಾಮ ಪಂಚಾಯಿತಿಗೆ ತೆರಳಿ ಅಲ್ಲಿ ಇತ್ತೀಚೆಗಷ್ಟೆ ಅಧ್ಯಕ್ಷರಾಗಿ ಆಯ್ಕೆಯಾದ ರವಿ ಕುಮಾರ್ ಅವರನ್ನು ಗೌರವಿಸಿದ್ದಾರೆ. ಹೊರನಾಡು, ಸಂಸೆ, ಕಳಸ ಮುಂತಾದೆಡೆ ಪ್ರವಾಸ ಮಾಡಿ ಕೆಲ ಮುಖಂಡರನ್ನು ಬೇಟಿ ಮಾಡಿ ಮಾಡಿದ್ದಾರೆ.
ಮೂಲತಃ ಸಕಲೇಶಪುರದವರಾದ ರುದ್ರೇಶ್ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರು ಮತ್ತು ಚಲನ ಚಿತ್ರ ನಿರ್ಮಾಪಕರೂ ಆಗಿದ್ದಾರೆ.ಈಗಾಗಲೇ ಮೂಡಿಗೆರೆ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡು, ರಾಜಕೀಯ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅಲ್ಲದೆ ಈ ಬಾರಿ ಮಳೆಯಿಂದ ಮನೆ ಕಳೆದುಕೊಂಡವರ ಮನೆಗೆ ತೆರಳಿ ನೆರವು ನೀಡಿದ್ದಾರೆ.
ಇದರಿಂದ ಮೂಡಿಗೆರೆ ಕ್ಷೇತ್ರದಲ್ಲಿ ರುದ್ರೇಶ್ ಕಹಳೆ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.