ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸುಪ್ರೀಯ ಪದ್ಮಪ್ರಭಾ ಮತ್ತು ದಯಾನಂದ ಶಿವಶಂಕರ ಭಟ್ ಇವರನ್ನು ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಬೀಳ್ಕೊಡಲಾಯಿತು.
ದಯಾನಂದ ಶಿವಶಂಕರ ಭಟ್ ಇವರು ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ 23 ವರ್ಷಗಳಿಂದ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ, ಈಗ ಗ್ರೇಡ್ 2 ಕಾರ್ಯದರ್ಶಿಯಾಗಿ ಬಡ್ತಿ ಹೊಂದಿ ತೋಟದೂರು ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿದ್ದಾರೆ.
ಶ್ರೀಮತಿ ಸುಪ್ರೀಯ ಪದ್ಮಪ್ರಭಾ ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಕಳೆದ 19 ವರ್ಷಗಳಿಂದ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸಿ, ಈಗ ಗ್ರೇಡ್ 2 ಕಾರ್ಯದರ್ಶಿಯಾಗಿ ಬಡ್ತಿಹೊಂದಿ ಮರಸಣಿಗೆ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿದ್ದಾರೆ.
ಇವರನ್ನು ಸಂಸೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷ ರವಿ ಕುಮಾರ್, ಉಪಾಧ್ಯಕ್ಷೆ ಕೆ.ಜೆ ಜಲಜಾಕ್ಷಿ, ಸದಸ್ಯರಾದ ಶ್ರೇಯಂಸ ಕುಮಾರ್, ಶಂಕರೇಗೌಡ, ಬಿ.ಸಿ.ಮಂಜುನಾಥ್, ಉದಯ ಕುಮಾರ್,ಶಮಂತ್ ಶಾಂತ ರಾಮ್, ಕಾಮಾಕ್ಷಿ, ಮಮತಾ, ಸುನೀತಾ, ಜೆ.ಎಲ್ ಪ್ರವೀಣ್, ಪ್ರತಿಮಾ, ಪೂರ್ಣಿಮಾ, ಶಾಂತ, ಪಿಡಿಒ ಕಾಶಪ್ಪ ಇದ್ದರು.