ಕಳಸ ತಾಲೂಕು ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ಸರ್ಕಾರಿ ಪ್ರೌಢಶಾಲೆ ಸಂಸೆ ಯಲ್ಲಿ ಸೆ 7 ಮತ್ತು 8ರಂದು ನಡೆಯಲಿದ್ದು ಈ ಕ್ರೀಡಾಕೂಟಕ್ಕೆ ಕ್ರೀಡಾಂಗಣವನ್ನು ಶೌರ್ಯ ತಂಡದವರು ಬುಧವಾರ ಸ್ವಚ್ಛಗೊಳಿಸಿದರು.
ಶೌರ್ಯ ಸದಸ್ಯರು ಹಾಗೂ ಪೋಷಕರು, ಶಿಕ್ಷಕ ವೃಂದ ಹಾಗೂ ಮಕ್ಕಳು ಕೂಡ ಭಾಗವಹಿಸಿ ಕ್ರೀಡಾಂಗಣವನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಿದರು.
8 ಕಳೆ ಹೊಡೆಯುವ ಯಂತ್ರದಿಂದ 2ಎಕರೆ ಮೈದಾನದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು.
ಯಥೇಚ್ಛವಾಗಿ ಬೆಳೆದಿದ್ದ ಮುಳ್ಳಿನ ಗಿಡಗಳನ್ನು ಬುಡ ಸಹಿತ ಕಿತ್ತು ತೆಗೆದರು.
ಬೆಳಿಗ್ಗೆ 10 ಘಂಟೆಗೆ ಪ್ರಾರಂಭಿಸಿ ಸಂಜೆ 5 ಘಂಟೆ ತನಕ 40 ಜನ ಭಾಗವಹಿಸಿ ಸ್ವಚ್ಚತಾ ಕಾರ್ಯವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಶಿವರಾಜ್ ಸರ್, ಸೇವಾ ಪ್ರತಿನಿಧಿ ಆದ ವಿನುತ, ಶೌರ್ಯ ಸಂಯೋಜಕರಾದ ಬಿಕೆ ಮಹೇಶ್, ಶೌರ್ಯ ಸದಸ್ಯರಾದ ಸತೀಶ್ ಬಿ ಎಂ, ಮಂಜುನಾಥ್, ಸುಧಾಕರ, ದಿವಾಕರ, ದ್ಯಾವಪ್ಪ, ಇದ್ದರು.
ಹಾಗೂ ಶಾಲಾ ಶಿಕ್ಷಕರಾದ ಲೋಕೇಶ್ , ಶಿಕ್ಷಕಿ ಹೆಲನ್ ಹಾಗೂ ಊರಿನ ಗ್ರಾಮಸ್ಥರು ಶೌರ್ಯ ತಂಡದ ಕಾರ್ಯವನ್ನು ತುಂಬು ಹೃದಯದಿಂದ ಪ್ರಶಂಸಿಸಿದರು.