ಕಳಸ ಅರಣ್ಯ ಇಲಾಖೆಯ ಮಾವಿನಕೆರೆ ವೃತ್ತದಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈ ಶಂಕರ್ ಅವರನ್ನು ಇಲಾಖೆ ಅಮಾನತು ಮಾಡಿದೆ.
ಕಳಸ ಶಾಖೆಯ ಕಳಕೋಡು ಅಧಿಸೂಚಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಒತ್ತುವರಿ ಪ್ರದೇಶದಲ್ಲಿ ಬೀಟೆ,ಹೊನ್ನೆ ಹಾಗೂ 18 ಕಾಡುಜಾತಿಯ ಮರಗಳ ಕಡಿತಲೆ ಮಾಡಿರುವುದು,ಮಾವಿನಕೆರೆ ಗ್ರಾಮದ ಸ.ನಂ 945ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಿರುವ ನೆಡುತೋಪಿನಲ್ಲಿ 29 ಗಾಳಿ ಜಾತಿಯ ಮರ ಕಡಿತಲೆ, ಮಾವಿನಕೆರೆ ಸ.ನಂ.641 ಅರಣ್ಯ ಪ್ರದೇಶದಲ್ಲಿ 100ಮೀ 10 ಅಡಿ ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿರುವುದು,ಕಳಸ ಅರಣ್ಯ ಇಲಾಖೆ ಕಚೇರಿಯ ಗೋದಾಮಿನಿಂದ 197 ಕೆ.ಜಿ ಶ್ರೀಗಂದ ತುಂಡುಗಳು ಕಳವಾಗಿರುವುದು.
ಇದರ ಕರ್ತವ್ಯ ನಿರ್ಲಕ್ಷತೆಗಾಗಿ ಕಾರಣ ಕೇಳಿ ತಿಳುವಳಿಕೆ ಪತ್ರವನ್ನು ಜಾರಿಗೊಳಿಸಲಾಗಿತ್ತು.ಆದರೆ ಈ ಪತ್ರಕ್ಕೆ ಯಾವುದೇ ಲಿಖಿತ ಸಮಜಾಯಿಸಿ ಸಲ್ಲಿಸದೆ ಇರುವುದರಿಂದ ಶಂಕರ್ ಅವರನ್ನು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿಂದೆ ನಿಲೇಶ್ ದೆವಬಾ ಅಮಾನತು ಮಾಡಿದ್ದಾರೆ.