ಕಳಸ ಸವಿತಾ ಭಂಡಾರಿ ಸಮಾಜವು ತನ್ನ ಸಂಘಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ಭೂಮಿ ಗುರುತಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದೆ.
ಸರ್ವೆ ನಂಬರ್ 496ರಲ್ಲಿ 1 ಎಕರೆ ಭೂಮಿಯನ್ನು ನಾವು ಗುರುತಿಸಿ ಜಿಲ್ಲಾಧಿಕಾರಿಗಳಿಗೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದೇವೆ.ಈ ಭೂಮಿಗೆ ಬೇಲಿ ಹಾಕಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಿತ್ತು ಎಸೆದಿದ್ದಾರೆ.ಆದರೆ ಅದೇ ಭೂಮಿಯನ್ನು ಈಗ ಖಾಸಗಿ ವ್ಯಕ್ತಿ ಅತಿಕ್ರಮಿಸಿಕೊಂಡಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆ ಚಕಾರ ಎತ್ತುತ್ತಿಲ್ಲ ಎಂದು ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಬಾಂಧವರು ತಾಲ್ಲೂಕಿನಾಧ್ಯಂತ ತಮ್ಮ ಎಲ್ಲಾ ಕ್ಷೌರಿಕ ಅಂಗಡಿಗಳನ್ನು ಮುಚ್ಚಿ ಕಳಸ ಅರಣ್ಯ ಇಲಾಖೆಯ ಮುಂದೆ ಜಮಾಯಿಸಿದ್ದರು.
ವಲಯ ಅರಣ್ಯ ಅಧಿಕಾರಿ ನಿರಂಜನ್ ಮನವಿ ಸ್ವೀಕರಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.