ಕುವೆಂಪು ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ವೇಳಾಪಟ್ಟಿ ಖಂಡಿಸಿ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಕಳಸ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕುವೆಂಪು ವಿಶ್ವವಿದ್ಯಾಲಯವು ದಿನಾಂಕ:18-08-2022 ರಂದು ನೂತನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಇದರ ಅನ್ವಯ ಪದವಿಯ 4 ಮತ್ತು 6 ನೇ ಸೆಮ್ ನ ವಿದ್ಯಾರ್ಥಿಗಳಿಗೆ ದಿನಾಂಕ:30 08 2022 ರಂದು ಪ್ರಸಕ್ತ ಸೆಮ್ ನ ಕೊನೆಯ ದಿನವೆಂದು ಪ್ರಕಟಿಸಿದ್ದು ಮತ್ತು ದಿನಾಂಕ:07-09-2_-11-22 ರಿಂದ ಪರೀಕ್ಷೆಗಳನ್ನು ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ಪ್ರಸಕ್ತ ಸೆಮ್ ನ ವಿದ್ಯಾರ್ಥಿಗಳಿಗೆ ತರಗತಿಗಳು ಜೂನ್ ನಿಂದ ಆರಂಭವಾಗಿರುವುದರಿಂದ ನೂತನ ಆದೇಶದ ಅನ್ವಯ ಈ ಸೆಮ್ ನ ವಿದ್ಯಾರ್ಥಿಗಳಿಗೆ ಆಗತ್ಯಕ್ಕಿಂತ ಕಡಿಮೆ ತರಗತಿ ಅವಧಿಗಳಾಗಿರುವುದರಿಂದ ಪಾಠ ಸಂಪೂರ್ಣ ವಾಗದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೊಂದರೆ ಅನುಭವಿಸುವಂತಾಗಬಹುದು ಮತ್ತು ಒತ್ತಡದಲ್ಲಿ ಪರೀಕ್ಷೆ ಎದುರಿಸುವಂತಾಗುತ್ತದೆ. ಇದಷ್ಟೇ ಅಲ್ಲದೇ 2ನೇ ಸೆಮ್ ನ ವಿದ್ಯಾರ್ಥಿಗಳು ಸಹ ಇದೇ ರೀತಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ನೂತನವಾಗಿ ಹೊರಡಿಸಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಹಿಂತೆಗೆದುಕೊಂಡು ಪರೀಕ್ಷೆರಿಸಿ ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ನು ರಚಿಸಬೇಕೆಂದು ಕಾಲೇಜು ವಿದ್ಯಾರ್ಥಿ ಸಂಘ ಆಗ್ರಹಿಸಿದರು.
ವಿದ್ಯಾರ್ಥಿಗಳು ಕಾಲೇಜಿನಿಂದ ಕಳಸ ತಾಲ್ಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಉಪ ತಹಶಿಲ್ದಾರ್ ಹೇಮಂತ್ ಕುಮಾರ್ ಅವರ ಮುಖಾಂತರ ಮನವಿ ಸಲ್ಲಿಸಿದರು.
ಅಲ್ಲದೆ ವರ್ಷದ ಬಿಕಾಂ, ಬಿಎ, ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಬಹಳ ಏರಿಕೆಮಾಡಿದೆ. ಈ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ
ಸುಕೇಶ್,ಅನುಷ್,ಅಜಯ್ ಕುಮಾರ್,ಅವಿನಾಶ್,ಪ್ರತಾಪ್,ವಿಜೇತ್,ಚರಣ್,ಭರತ್,ಅನನ್ಯ,ಸಂಚಿತ,ಪ್ರಗತಿ,ಸ್ಪರ್ಶ,ನಿತ್ಯ ಇದ್ದರು.