ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಬೇಕಿದ್ದ ಬಾಳೆಹೊಳೆ ಪದವಿ ಪೂರ್ವ ಕಾಲೇಜು ಇದೀಗ ಊರಲ್ಲೊಂದು ಕಾನನದ ಮದ್ಯೆ ಅನೈತಿಕ ಚಟುವಟಿಕೆಯ ಕೇಂದ್ರ ಬಿಂದುವಾಗಿದೆ.
ಎಲ್ಲಾ ವ್ಯವಸ್ಥೆಗಳು ಇದ್ದರೂ ಕೂಡ ಉಪನ್ಯಾಸಕರ ಕೊರತೆಯಿಂದ ಕಳೆದ ಏಳು ವರ್ಷಗಳ ಹಿಂದೆ ಮುಚ್ಚಿರುವ ಈ ಕಾಲೇಜು ಪುಂಡ ಪೋಕುರಿಗಳ ಅಡ್ಡೆಯಾಗಿದೆ.
ಸುಮಾರು 22 ಲಕ್ಷ ವೆಚ್ಚದ ಈ ಕಟ್ಟಡದ ಕೊಠಡಿಗಳ ಬಾಗಿಲುಗಳನ್ನು ಮುರಿದು ಅನೈತಿಕ ಚಟುವಟಿಕೆಯ ಅಡ್ಡೆಯನ್ನಾಗಿ ಮಾಡಲಾಗಿದೆ. ನಿತ್ಯ ಪಾರ್ಟಿ ಮಾಡುವ ಕೇಂದ್ರವಾಗಿದೆ.ಅಲ್ಲಿಯ ಸ್ವಿಚ್ ಬೋರ್ಡ್ಗಳನ್ನು ಒಡೆದು ಹಾಕಲಾಗಿದೆ.ಹೆಣ್ಣು ಮಕ್ಕಳ ಶುಚಿತ್ವಕ್ಕಾಗಿ ಸರ್ಕಾರ ಉಚಿತವಾಗಿ ನೀಡುವ ಶುಚಿ ಸ್ಯಾನಿಟರ್ ಪ್ಯಾಡ್ ಗಳು ಕಾಲೇಜು ಕೊಠಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡು ಬಂದಿದ್ದು.ಇದನ್ನು ಮನಸೋ ಇಚ್ಚೆಯಂತೆ ಬಳಸಿಕೊಳ್ಳಲಾಗಿದೆ.ವಿಪರ್ಯಸ ಎಂದರೆ ಅಕ್ಷರ ಬರೆಯುವ ಬ್ಲಾಕ್ ಬೋರ್ಡ್ ಮೇಲೆ ಸ್ಯಾನಿಟರಿ ಪ್ಯಾಡ್ಗಳನ್ನು ಅಂಟಿಸಿ ವಿಕೃತಿ ಮೆರೆಯಲಾಗಿದೆ.ಮಧ್ಯಪಾನ ಮಾಡುವ ಅಡ್ಡೆಯನ್ನಾಗಿ ಮಾಡಲಾಗಿದೆ.ಅದೆಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ವಿಕೃತಿ ಮೆರೆಯಲಾಗಿದೆ.
ಇದೇ ಕಾಲೇಜಿನ ಪಕ್ಕದಲ್ಲಿ ಬಾಳೆಹೊಳೆ ಪ್ರೌಢ ಶಾಲೆಯು ಇದೆ.ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ.ಅಲ್ಲಿಯ ಮಕ್ಕಳು ಕೂಡ ಈ ಕಾಲೇಜಿನ ಆವರಣದಲ್ಲಿ ಓಡಾಡುತ್ತಾರೆ.ಆದರೆ ಈ ಕಾಲೇಜಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಈ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ.
ಎಲ್ಲಾ ಮೂಲಭೂತ ಸೌಲಭ್ಯಗಳಿರುವ ಈ ಕಾಲೇಜನ್ನು ಬಾಳೆಹೊಳೆಗೆ ಸಮುದಾಯ ಭವನವನ್ನಾಗಿ ಪರಿವರ್ತಿಸಬಹುದು.ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವಂತೆ ಬಳಸಿಕೊಳ್ಳಬಹುದು.ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇರುವ ಪರಿಣಾಮ ಈ ಮುಚ್ಚಿದ ಕಾಲೇಜಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಯ ಹಿನ್ನಲೆಯಲ್ಲಿ ಬಾಳೆಹೊಳೆಗೆ ಕಪ್ಪು ಚುಕ್ಕೆಂತಾಗಿದೆ.