ಕಳೆದ ಮೂರು ದಿನಗಳಿಂದ ಕಳಸ ಕಲಶೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಲೀಲೋತ್ಸವಕ್ಕೆ ಭಾನುವಾರ ತೆರೆ ಬಿದ್ದಿದೆ.
ಶುಕ್ರವಾರ ಶ್ರೀ ಕೃಷ್ಣನನ್ನು ಅಗ್ರಹಾರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನದಿಂದ ಕಲಶೇಶ್ವರ ದೇವಸ್ಥಾನಕ್ಕೆ ಕರೆದು ಕೊಂಡು ಬಂದು ಅಂದು ಜನನ, ನಾಮಕರಣ, ಸಂಸ್ಕಾರಗಳು ನಡೆದವು.
ಶನಿವಾರ ಕೃಷ್ಣ ಲೀಲೋತ್ಸವ, ಮೊಸರುಕುಡಿಕೆ, ಕಾಯಿಹೊಡೆಯುವುದು, ಜಾರುಗಂಬ ಉತ್ಸವಗಳು ನಡೆದು, ಭಾನುವಾರ ಶ್ರೀ ಕೃಷ್ಣನನ್ನು ಅಗ್ರಹಾರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನಕ್ಕೆ ಪಲ್ಲಕಿಯಲ್ಲಿ ಕರೆದುಕೊಂಡು ಹೋಗಲಾಯಿತು.
ಇದರೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಶ್ರೀ ಕೃಷ್ಣ ಲೀಲೋತ್ಸವಕ್ಕೆ ತೆರೆ ಬಿದ್ದಿದೆ.